ಖ್ಯಾತ ಕವಿ, ಕಥೆಗಾರ ಜಯಂತಕಾಯ್ಕಿಣಿ ನಾಳೆ ರಾಮಕುಂಜಕ್ಕೆ ► ರಾಮಕುಂಜೇಶ್ವರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಜು.29. ಕನ್ನಡದ ಖ್ಯಾತ ಕವಿ, ಕಥೆಗಾರ, ಸಾಹಿತ್ಯದ ಗಣಿ ಜಯಂತಕಾಯ್ಕಿಣಿಯವರು ಜುಲೈ 30 ಸೋಮವಾರದಂದು ರಾಮಕುಂಜಕ್ಕೆ ಭೇಟಿ ನೀಡಲಿದ್ದಾರೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕಾಲೇಜಿ‌ನ ಸಭಾಂಗಣದಲ್ಲಿ ಸಾಹಿತ್ಯ ಮತ್ತು ಇತರ ವಿಷಯಗಳ ಬಗ್ಗೆ ಸಂವಾದ ನಡೆಸಲಿದ್ದಾರೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಕಡಬ: ಹುಚ್ಚು ನಾಯಿ ಕಡಿತ ➤ ವ್ಯಕ್ತಿಗೆ ಗಾಯ

error: Content is protected !!
Scroll to Top