ಕರಾವಳಿಯಲ್ಲಿ ಹಾಡುಹಗಲೇ ವ್ಯಕ್ತಿಯ ಇರಿದು ಬರ್ಬರ ಕೊಲೆ ► ಪಬ್ ಗೆ ನುಗ್ಗಿದ ತಂಡದಿಂದ ನಡೆಯಿತು ಕೃತ್ಯ

(ನ್ಯೂಸ್ ಕಡಬ) newskadaba.com ಉಡುಪಿ, ಜು.29. ಇಸ್ಪೀಟ್ ಕ್ಲಬ್ ಒಂದರಲ್ಲಿ ತಂಡವೊಂದು ಮಾಲಕನನ್ನು ಹಾಡುಹಗಲೇ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಣಿಪಾಲದಲ್ಲಿ ಭಾನುವಾರದಂದು ನಡೆದಿದೆ.

ಮೃತರನ್ನು ‘ಸತ್ಯ ನ್ಯೂಸ್’ ವಾರ ಪತ್ರಿಕೆಯನ್ನು ನಡೆಸುತ್ತಿದ್ದ ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಗುರುಪ್ರಸಾದ್ ಭಟ್(45) ಎಂದು ಗುರುತಿಸಲಾಗಿದೆ. ಹಣಕಾಸಿನ ವ್ಯವಹಾರವನ್ನು ನಡೆಸುತ್ತಿದ್ದ ಗುರುಪ್ರಸಾದ್, ಭಾನುವಾರದಂದು ಕ್ಲಬ್ ನಲ್ಲಿದ್ದ ವೇಳೆ ಓಮ್ನಿಯಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡವೊಂದು ಕ್ಲಬ್ ಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಗುರುಪ್ರಸಾದ್ ರನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Also Read  ಅಡ್ಡಹೊಳೆ: ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆ ► ರಾಷ್ಟ್ರೀಯ ಹೆದ್ದಾರಿ ತಡೆ

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲಿಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಮಣಿಪಾಲ ಇನ್ಸ್‌ಪೆಕ್ಟರ್ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top