ಕುಂತೂರು: ಶಾಲೆಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ಶಾಲೆಗೆಂದು ತೆರಳಿದ ವಿದ್ಯಾರ್ಥಿಯೋರ್ವ ಮನೆಗೆ ಬಾರದೆ ನಾಪತ್ತೆಯಾದ ಘಟನೆ ಕುಂತೂರಿನಲ್ಲಿ ನಡೆದಿದೆ.

 

ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು
ರಾಮಕುಂಜೇಶ್ವರ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಂತೂರು ಸಮೀಪದ ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಆಶಿಕ್ ಅಲಿ(16) ಎಂದು ಗುರುತಿಸಲಾಗಿದೆ. ಈತ ಜುಲೈ 26 ರಂದು ಶಾಲೆಗೆಂದು ತೆರಳಿದವನು ಮನೆಗೆ ಬರದೆ ನಾಪತ್ತೆಯಾಗಿರುವುದಾಗಿ ಈತನ ತಾಯಿ ಸಕೀನಾ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 5’9″ ಎತ್ತರ ಹೊಂದಿದ್ದು, ಕೋಲು ಮುಖದೊಂದಿಗೆ ಎಣ್ಣೆ ಕಪ್ಪು ಮೈಬಣ್ಣವನ್ನು ಹೊಂದಿರುವ ಈತ ಬ್ಯಾರಿ, ಕನ್ನಡ, ತುಳು, ಮಲಯಾಳಂ ಭಾಷೆಗಳನ್ನು ಮಾತನಾಡುತ್ತಿದ್ದು, ಈತನನ್ನು ಕಂಡವರು ಕಡಬ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Also Read  ಇಂದು ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ವೀಕೆಂಡ್ ಕರ್ಫ್ಯೂ ➤ ಕಡಬ ಸೇರಿದಂತೆ ಜಿಲ್ಲಾದ್ಯಂತ ಏನಿರುತ್ತೆ ಗೊತ್ತೇ..?

error: Content is protected !!
Scroll to Top