ಮಂಗಳೂರು – ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ತಪ್ಪದ ನಿಲುಗಡೆಯ ಕಿರಿಕಿರಿ ► ನಿಲುಗಡೆ ನೀಡದಕ್ಕೆ ಬಸ್ ಕಂಡಕ್ಟರನ್ನು ತರಾಟೆಗೆತ್ತಿಕೊಂಡ ಸಾರ್ವಜನಿಕರು

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಕಡಬ, ಜು.29. ಮಂಗಳೂರು-ಕಡಬ-ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ನಿಗದಿತ ಸ್ಥಳದಲ್ಲಿ ನಿಲ್ಲಿಸಿಲ್ಲವೆಂದು ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್, ಚಾಲಕರನ್ನು ಕಡಬದಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರದಂದು ನಡೆದ ಬಗ್ಗೆ ವರದಿಯಾಗಿದೆ.

ಮಂಗಳೂರು-ಸುಬ್ರಹ್ಮಣ್ಯ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ಕುಂಡಾಜೆ ಎಂಬಲ್ಲಿ ನಿಲ್ಲಿಸಿಲ್ಲ ಹಾಗೂ ಕಡಬದಲ್ಲಿ ಕಲ್ಲಾಜೆಯ ಪ್ರಯಾಣಿಕರನ್ನು ಅಲ್ಲಿ ನಿಲುಗಡೆಗೊಳಿಸಲು ಸಾಧ್ಯವಿಲ್ಲವೆಂದು ಹತ್ತಲು ನಿರಾಕರಿಸಿದಾಗ ಮಾಹಿತಿ ಅರಿತ ಕಡಬದ ಸಾರ್ವಜನಿಕರು ಹಾಗೂ ಸಂಗಮ ಜೀಪು ಚಾಲಕರು ಕಂಡಕ್ಟರನ್ನು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಸಾರ್ವಜನಿಕರು ಕಡಬ ಸಂಚಾರ ನಿಯಂತ್ರಣಾಧಿಕಾರಿಯವರಲ್ಲೂ ಈ ಬಗ್ಗೆ ಸಮಸ್ಯೆಯನ್ನು ವಿವರಿಸಿದ್ದು, ಈ ಸಂದರ್ಭದಲ್ಲಿ ಇಂತಹ ವ್ಯವಸ್ಥೆಯಿಂದ ಸಾರ್ವಜನಿಕರು ತೀರಾ ತೊಂದರೆ ಅನುಭವಿಸುತ್ತಿದ್ದು, ಕೆಎಸ್ಸಾರ್ಟಿಸಿಯವರು ಏಕಾಏಕಿ ಸೆಟಲ್ ಬಸ್ಗಳನ್ನು ಎಕ್ಸ್‌ಪ್ರೆಸ್ ಬಸ್ ಮಾಡಿ, ಸಾರ್ವಜನಿಕರು ಸಮಸ್ಯೆ ಬಗೆಹರಿಸಿ ಎಂದು ಇಲಾಖೆಗಳಿಗೆ ಮನವಿ ಮಾಡಿದರೂ ಇನ್ನೂ ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದು, ಕೂಡಲೇ ಕ್ರಮಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.

Also Read  ಸರಸ್ವತೀ ವಿದ್ಯಾಲಯ ಮತ್ತು ಶ್ರೀ ಭಾರತಿ ಶಿಶುಮಂದಿರದ ವತಿಯಿಂದ ➤ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಕಳೆದ ಕೆಲ ತಿಂಗಳಿನಿಂದ ಮಂಗಳೂರು-ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಸ್ತೆಯಲ್ಲಿ ಸಟಲ್ ಬಸ್‌ಗಳನ್ನು ಎಕ್ಸ್‌ಪ್ರೆಸ್ ಬಸ್ ಗಳನ್ನಾಗಿ ಪರಿವರ್ತಿಸಿ ಹೆಚ್ಚುವರಿ ಹಣ ಮತ್ತು ನಿಗದಿತ ನಿಲುಗಡೆ ಸಮಸ್ಯೆಯು ಇನ್ನೂ ಜೀವಂತವಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿರುವುದರಿಂದ ಈ ಬಗ್ಗೆ ಮೇಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.

error: Content is protected !!
Scroll to Top