ತುಂಬೆ: ಆಟವಾಡುತ್ತಾ ಶೌಚಾಲಯದ ಗುಂಡಿಗೆ ಬಿದ್ದ ಮಗು ► ಮೇಲಕ್ಕೆತ್ತುವಷ್ಟರಲ್ಲಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು.28. ಸ್ವಚ್ಛ ಮಾಡಿ ತೆರೆದಿಟ್ಟಿದ್ದ ಶೌಚಾಲಯದ ಗುಂಡಿಗೆ ಬಿದ್ದ ಎರಡು ವರ್ಷದ ಮಗುವೊಂದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಶುಕ್ರವಾರದಂದು ನಡೆದಿದೆ.

ಮೃತ ಮಗುವನ್ನು ತುಂಬೆ ವಳವೂರು ನಿವಾಸಿ ಅಹ್ಮದ್ ಬಾವ ಎಂಬವರ ಪುತ್ರಿ ಆಯಿಶಾ ಎಂದು ಗುರುತಿಸಲಾಗಿದೆ. ಇವರ ಮನೆಯಲ್ಲಿನ ಶೌಚಾಲಯದ ಗುಂಡಿಯನ್ನು ಸ್ವಚ್ಛಗೊಳಿಸಿ ಮುಚ್ಚುವಷ್ಟರಲ್ಲಿ ಮಗು ವಾಕರ್‌ನಲ್ಲಿ ಆಟವಾಡುತ್ತಾ ಆಕಸ್ಮಿಕವಾಗಿ ಜಾರಿ ಶೌಚಾಲಯದ ಗುಂಡಿಗೆ ಬಿದ್ದಿದೆ. ತಕ್ಷಣವೇ ಮಗವನ್ನು ಮೇಲಕ್ಕೆತ್ತಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.

Also Read  ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಅರ್ಜಿ ಆಹ್ವಾನ ಕಾಲಾವಧಿ ವಿಸ್ತರಣೆ ►ಪ್ರಸ್ತುತ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

error: Content is protected !!
Scroll to Top