ಗ್ರಹಣಕ್ಕೆ ಮೊದಲು ಊರು ಬಿಡದಿದ್ದಲ್ಲಿ ಸಾವು ಸಂಭವಿಸಲಿದೆಯೆಂದ ಜ್ಯೋತಿಷಿ ► ಜ್ಯೋತಿಷಿಯ ಮಾತಿಗೆ ಹೆದರಿ ಗ್ರಾಮ ತೊರೆದ 60 ಕುಟುಂಬಗಳು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜು.27. ಮೂಡ ನಂಬಿಕೆಗೆ ಕಟ್ಟುಬಿದ್ದು ಜ್ಯೋತಿಷಿಯ ಮಾತನ್ನು ನಂಬಿದ ಸುಮಾರು 60 ಕುಟುಂಬಗಳು, ಊರನ್ನೇ ಬಿಟ್ಟು ಹೋಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಈ ಊರಿನಲ್ಲಿ ನೀವು ದೇವಾಲಯವನ್ನು ಕಟ್ಟಿದ್ದು ತಪ್ಪಾಗಿದ್ದು, ಚಂದ್ರಗ್ರಹಣದ ವೇಳೆಗೆ ನೀವು ಊರನ್ನು ತೊರೆಯದಿದ್ದರೆ ಮೂರು ಸಾವು ಸಂಭವಿಸಲಿದೆ. ಕೂಡಲೇ ಊರನ್ನು ತೊರೆಯುವುದೊಳಿತು ಎಂದು ಮಲಯಾಳಿ ಜ್ಯೋತಿಷಿಯೊಬ್ಬರು ಭವಿಷ್ಯ ಹೇಳಿದ್ದನ್ನು‌ ಹೆದರಿದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್​. ಪುರ ತಾಲೂಕಿನ ಬಾಳೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸುಮಾರು 15 ವರ್ಷಗಳಿಂದ ವಾಸವಾಗಿದ್ದ 60 ಕುಟುಂಬಗಳು ರಾತ್ರೋ ರಾತ್ರಿ ಬದುಕು ಕಟ್ಟಿಕೊಂಡಿದ್ದ ಗ್ರಾಮವನ್ನೇ ಬಿಟ್ಟು, ಬೇರೆಡೆ ತೆರಳಿವೆ.

Also Read  ನೇತ್ರಾವತಿ ಸೇತುವೆಯಿಂದ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಬಾಳೆಹಳ್ಳಿ ಗ್ರಾಮದಲ್ಲಿ ಕಳೆದ 20 ವರ್ಷಗಳಲ್ಲಿ 25 ಕ್ಕೂ ಹೆಚ್ಚಿನ ಸಾವುಗಳು ಸಂಭವಿಸಿದ್ದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಸಾವು ಸಂಭವಿಸುವ ಮುನ್ನ ಊರನ್ನು ಬಿಟ್ಟು ಬಿಡಲು ನಿರ್ಧರಿಸಿದ ಕುಟುಂಬಗಳು ಅಕ್ಕ-ಪಕ್ಕದ ಗ್ರಾಮಸ್ಥರಿಗೂ ತಿಳಿಸದೆ ಊರನ್ನೇ ಬಿಟ್ಟಿವೆ ಎನ್ನಲಾಗಿದೆ.

error: Content is protected !!
Scroll to Top