ಬೆಳ್ಳಾರೆ: ಮನೆಯ ಬೀಗ ಮುರಿದು ನಗದು ಸಹಿತ ಚಿನ್ನಾಭರಣ ಕಳ್ಳತನ ► 48 ಗಂಟೆಗಳೊಳಗೆ ಕಳ್ಳನನ್ನು ಬಂಧಿಸಿದ ಬೆಳ್ಳಾರೆ ಪೊಲೀಸರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.27. ಮನೆಯ ಬೀಗ ಮುರಿದು ನಗದು‌ ಸೇರಿದಂತೆ ಚಿನ್ನಾಭರಣ ಕಳ್ಳತನ ಪ್ರಕರಣವನ್ನು 48 ಗಂಟೆಗಳೊಳಗಾಗಿ ಭೇದಿಸಿರುವ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದ ರಾಮಕುಮೇರಿ ನಿವಾಸಿ ಗೋಪಾಲಕೃಷ್ಣ ನಾಯಕ್ ಎಂಬವರ ಪುತ್ರ ಸತ್ಯನಾರಾಯಣ ಎಂಬವರ ಮನೆಯಿಂದ ಬುಧವಾರದಂದು ಮುಂಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿ ಹಾಲ್ ನಲ್ಲಿದ್ದ ಬೀರುವಿನ ಬಾಗಿಲನ್ನು ಪಕ್ಕದ ಶೆಲ್ಫ್ ನಲ್ಲಿದ್ದ ಕೀಯಿಂದ ತೆರೆದು ಲಾಕರ್ ನ ಬೀಗವನ್ನು ಮುರಿದು ಅದರೊಳಗಿದ್ದ ನಗದು ಹಣ 26500 ರೂ,ಮತ್ತು 6 ಪವನ್ ಚಿನ್ನದ ಒಡವೆಗಳು (ಅದರ ಅಂದಾಜು ಮೌಲ್ಯ ಒಂದು ಲಕ್ಷ ರೂ) ಕಳವು ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಪೊಲೀಸ್ ಅಧೀಕ್ಷಕರಾದ ಡಾ ಬಿ.ಆರ್.ರವಿಕಾಂತೇಗೌಡರವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜೀತ್ ಮತ್ತು ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಆರ್. ಸತೀಶ್ ಕುಮಾರ್, ಹಾಗೂ ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ಈರಯ್ಯ ಡಿ.ಎನ್. ರವರು ಆರೋಪಿ ಕೊಡಿಯಾಲ ಗ್ರಾಮದ ರಾಮಕುಮೇರಿ ನಿವಾಸಿ ತಂಬಯ್ಯ ಎಂಬವರ ಪುತ್ರ ಜಗದೀಶ್(23) ನನ್ನು ಬಂಧಿಸಿ ‌ಕಳವು ಮಾಡಿದ್ದ ನಗದು 26500 ರೂ ಹಾಗೂ 6 ಪವನ್ ಚಿನ್ನಕ್ಕೆ ವಶಪಡಿಸಿಕೊಂಡಿದ್ದಾರೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತೋಟಗಾರಿಕೆ ಇಲಾಖೆ ➤ ಗುತ್ತಿಗೆ ಆಧಾರದಲ್ಲಿ ಸೇವೆ

error: Content is protected !!
Scroll to Top