ಕಡಬ ಪೊಲೀಸ್ ಠಾಣೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

(ನ್ಯೂಸ್ ಕಡಬ) newskadaba.com ಕಡಬ, ಜು.25. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕಡಬ ಆರಕ್ಷಕ ಠಾಣೆಯ ವತಿಯಿಂದ ಜೇಸಿಐ ಕಡಬ ಕದಂಬ, ಕದಂಬ ಆಟೋ ಚಾಲಕ ಮಾಲಕರ ಸಂಘ ಹಾಗೂ ಸಂಗಮ ಟೂರಿಸ್ಟ್ ಜೀಪು ಚಾಲಕ ಮಾಲಕರ ಸಂಘದ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹವು ಸೋಮವಾರದಂದು ಕಡಬದಲ್ಲಿ ನಡೆಯಿತು.


ಕಡಬ ಪೇಟೆಯಲ್ಲಿ ಮೆರವಣಿಗೆ ನಡೆದ ಬಳಿಕ ಕಡಬ ಠಾಣೆಯಲ್ಲಿ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರು ರಸ್ತೆ ಸುರಕ್ಷತೆಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ ಸುರಕ್ಷತಾ ವಿಧಾನಗಳ ಬಗ್ಗೆ ದೃಶ್ಯಗಳ ಮೂಲಕ ಚಿತ್ರಣ ನೀಡಲಾಯಿತು. ಈ ಸಂದರ್ಭದಲ್ಲಿ ಕದಂಬ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ, ಸಂಗಮ ಟೂರಿಸ್ಟ್ ಜೀಪು ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶ್ರಫ್ ನೆಕ್ಕಿತ್ತಡ್ಕ, ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ ವೆಂಕಟೇಶ್ ಪಾಡ್ಲ, ಜೇಸಿಐ ವಲಯ 15 ರ ವಲಯಾಧಿಕಾರಿ ಶಿವಪ್ರಸಾದ್ ರೈ ಮೈಲೇರಿ, ಸಾಮಾಜಿಕ ಮುಂದಾಳು ರಘು ಕೊಠಾರಿ ಮೊದಲಾದವರು ಉಪಸ್ಥಿತರಿದ್ದರು.

Also Read  ಕಲ್ಲಾಜೆ: ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆದ ಬೈಕ್ ► ರಸ್ತೆಗೆಸೆಯಲ್ಪಟ್ಟ ಸವಾರ ಗಂಭೀರ

error: Content is protected !!
Scroll to Top