(ನ್ಯೂಸ್ ಕಡಬ) newskadaba.com ಕಡಬ, ಜು.24. ಕೋಡಿಂಬಾಳ ಗ್ರಾಮದ ಗುಂಡಿಮಜಲು ಎಂಬಲ್ಲಿ ವಾಸ್ತವ್ಯವಿರುವ ಪುರುಷೋತ್ತಮ(48ವ) ಮಂಗಳೂರಿನ ದಕ್ಕೆಯಲ್ಲಿ ಮೃತಪಟ್ಟಿದ್ದು ಜು.21ರಂದು ಮೃತದೇಹದ ಪತ್ತೆಯಾಗಿ ಕೋಡಿಂಬಾಳದ ಸ್ವಗೃಹದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ಸುಳ್ಯ ತಾಲೂಕಿನ ಪೈಚಾರ್ ಬಳಿ ಕಾಟೂರು ಎಂಬಲ್ಲಿರುವ ಮಾಯಿಲಪ್ಪ ಗೌಡರ ಪುತ್ರರಾಗಿದ್ದು ಕಳೆದ ಹತ್ತೊಂಬತ್ತು ವರ್ಷಗಳಿಂದ ಕೋಡಿಂಬಾಳದ ಗುಂಡಿಮಜಲಿನಲ್ಲಿ ವಾಸ್ತವ್ಯವಿದ್ದು, ಚಾಲಕ ವೃತ್ತಿಯವರಾಗಿದ್ದು ಕಳೆದ ಕೆಲವು ವರ್ಷಗಳ ಹಿಂದೆ ಮಂಗಳೂರಿನ ಬಂದರು ದಕ್ಕೆಯಲ್ಲಿ ಕಾವೇರಿ ಕಂಪೆನಿಯಲ್ಲಿ ಭರತ್ ಭೂಷನ್ ಎಂಬವರ ಮಾಲಕತ್ವದ ಮೀನಿನ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು. ನಂತರ ಕೆಲಸ ಬಿಟ್ಟು ಊರಿಗೆ ಬಂದವರು ಇಲ್ಲಿಯೆ ಲೋಕಲ್ ಪಿಕಪ್ ಗಾಡಿಯಲ್ಲಿ ದುಡಿಯುತ್ತಿದ್ದರು. ಇಲ್ಲಿಯ ಸಂಬಳದಿಂದ ಕುಟುಂಬದ ಖರ್ಚು ನಿರ್ವಹಣೆ ಕಷ್ಟವಾಗುತ್ತದೆ ಎಂದು ಮತ್ತೆ ಕಳೆದೆರಡು ವರ್ಷದಿಂದ ಮಂಗಳೂರಿಗೆ ಹೋಗಿ ತನ್ನ ಹಿಂದಿನ ವೃತ್ತಿಯನ್ನೇ ಅವಳಂಬಿಸಿದ್ದರು. ದಿನಾಲೂ ಪೋನ್ ಕರೆ ಮಾಡಿ ಪತ್ನಿಯವರಲ್ಲಿ ಮಾತಾನಾಡುತ್ತಿದ್ದು, ಜು.18ರಂದು ಮಾತನಾಡಿದ್ದರೆ, ಮರುದಿನ 19ರಂದು ಕರೆಮಾಡುವಾಗ ಸ್ವಿಚ್ಡ್ಆಫ್ ಬರುತ್ತಿತ್ತು ಎಂದು ತಿಳಿಸಿದ ಪತ್ನಿ ಪರಮೇಶ್ವರಿ ಕೂಡಲೇ ಕುಟುಂಬದವರೊಂದಿಗೆ ಮಂಗಳೂರಿಗೆ ಹೋಗಿ ಹುಡುಕಾಡಿದರು ಪತ್ತೆಯಾಗದೆ ವಾಪಸಾಗಿದ್ದು. ಜು.20ರಂದು ಪಾಂಡೆಶ್ವರ ಠಾಣೆಯಿಂದ ಶವ ಪತ್ತೆಯಾಗಿದೆ ಎಂಬ ಮಾಹಿತಿ ಮೇರೆಗೆ ತೆರಳಿ ಪರಿಶೀಲಿಸಿದಂತೆ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು ಶವದಲ್ಲಿದ್ದ ಅಂಗಿಯಿಂದ ಗುರುತು ಪತ್ತೆ ಹಚ್ಚಲಾಗಿದ್ದು ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕೋಡಿಂಬಾಳಕ್ಕೆ ಕೊಂಡೊಯ್ಯಲಾಯಿತು.
ಮೃತರು ಪತ್ನಿ ಪರಮೇಶ್ವರಿ, ಪುತ್ರರಾದ ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ದ್ವಿತೀಯ ಪಿಯುಸಿ ವಿದ್ಯಾಥರ್ಿ ಪ್ರವೀಣ, 9ನೇ ತರಗತಿ ವಿದ್ಯಾರ್ಥಿ ಗೌತಮ್ ರನ್ನು ಅಗಲಿದ್ದಾರೆ.