ಕೈಕಂಬ: ನದಿ ತಟದಲ್ಲಿ ಬಿದ್ದಿದ್ದ ವೃದ್ಧ ಮಹಿಳೆ ► ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜು.24. ನದಿ ತಟದಲ್ಲಿ ಬಿದ್ದಿದ್ದ ವೃದ್ಧ ಮಹಿಳೆಯೋರ್ವರನ್ನು ಸ್ಥಳೀಯರು ರಕ್ಷಿಸಿದರಾದರೂ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಸೋಮವಾರ ಸಂಜೆ ಕೈಕಂಬದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ದೇವರಮಾರು ನಿವಾಸಿ ಪೆರ್ನು ಗೌಡ ಎಂಬವರ ಪತ್ನಿ ಸುಶೀಲ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದಲ್ಲಿರುವ ಈಕೆಯ ಪುತ್ರಿಗೆ ಹೆರಿಗೆಯಾಗಿದೆಯೆಂದು ತಿಳಿದು ಮನೆಯಲ್ಲಿ ಹೇಳದೆ ಬಂದಿದ್ದ ಇವರು ಸೋಮವಾರ ಸಂಜೆ ಕೈಕಂಬ ಸಮೀಪದ ನದಿ ತಟದಲ್ಲಿ ಬಿದ್ದಿದ್ದರೆನ್ನಲಾಗಿದೆ. ಇದನ್ನು ಕಂಡ ಸ್ಥಳೀಯರು ಉಪಚರಿಸಿ ಕಡಬ ಠಾಣೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಡಬ ಠಾಣಾ ಉಪನಿರೀಕ್ಷಕ ಪ್ರಕಾಶ್ ದೇವಾಡಿಗರವರು ಸುಬ್ರಹ್ಮಣ್ಯ ದೇವಸ್ಥಾನದ ಆಂಬ್ಯುಲೆನ್ಸ್ ಮ‌ೂಲಕ ಕಡಬಕ್ಕೆ ಕರೆತರುವ ಪ್ರಯತ್ನ ನಡೆಸಿದರಾದರೂ ಅದಾಗಲೇ ಮೃತಪಟ್ಟಿದ್ದರು. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿರಿಸಲಾಗಿದೆ. ಸ್ಥಳಕ್ಕೆ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಸಾಮಾಜಿಕ ಮುಂದಾಳು ರಘು ಕೊಠಾರಿ ಮೊದಲಾದವರು ಭೇಟಿ ನೀಡಿದ್ದಾರೆ.

Also Read  ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ನೇಮಕಾತಿ

error: Content is protected !!
Scroll to Top