(ನ್ಯೂಸ್ ಕಡಬ) newskadaba.com ಕಡಬ, ಜು.23. ಕೊಲ ಪಶುಸಂಗೋಪನಾ ಇಲಾಖಾ ಜಾಗದಲ್ಲಿ ಹಾದು ಹೋಗಿರುವ ಸಾರ್ವಜನಿಕರು ಉಪಯೋಗಿಸುತ್ತಿರುವ ರಸ್ತೆ ಅಭಿವೃದ್ದಿಗೆ ಇಲಾಖೆ ಅಡ್ಡಿಪಡಿಸುತ್ತಿದೆ. ಹಾಗಾಗಿ ನಾದುರಸ್ತಿಯಲ್ಲಿರುವ ರಸ್ತೆಯನ್ನು ಅಭಿವೃದ್ದಿಪಡಿಸಬೇಕು. ಗ್ರಾಮ ಸಭೆಯನ್ನು ಮೊಟಕುಗೊಳಿಸಿ ಅದಿಕಾರಿಗಳು ಜನಪ್ರನಿದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದಾಗ ಸಭೆಯಲ್ಲಿ ಗೊಂದಲವೇರ್ಪಟ್ಟು ಬಳಿಕ ಸಭೆಯಲ್ಲಿದ್ದ ಕೆಲ ಜನಪ್ರತಿನಿಧಿಗಳು, ಅಧಿಕಾರಗಳು ಸ್ಥಳಕ್ಕೆ ತೆರಳಿ ತಾತ್ಕಲಿಕ ಪರಿಹಾರ ನೀಡುವ ಭರವಸೆ ನೀಡಿದ ಘಟನೆ ಕೊೈಲ ಗ್ರಾಮ ಸಭೆಯಲ್ಲಿ ನಡೆದಿದೆ.
ಶನಿವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಎಂ. ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಸಭೆ ನಡೆಯಿತು. ಸಭೆಯಲ್ಲಿ ವರದಿ ಮಂಡಿಸಿದ ಬಳಿಕ ಮಾತನಾಡಿದ ಸೋಮನಾಥ ಪಲ್ಲಡ್ಕ, ಸುಮಾರು 800 ಎಕರೆಯಲ್ಲಿರುವ ಕೊೈಲ ಪಶುಸಂಗೋಪನಾ ಇಲಾಖಾ ಜಾಗದಲ್ಲಿ ಹಾದು ಹೋಗಿರುವ ಎಲ್ಲಾ ರಸ್ತೆಯನ್ನು ಪಲ್ಲಡ್ಕ, ಕಾಯರಕಟ್ಟ, ಕೊನೆಮಜಲು, ಆನೆಗುಂಡಿ , ವಳಕಡಮ ಮೊದಲಾದ ಪ್ರದೇಶದ ಜನತೆ, ಆತೂರು ದೇವಸ್ಥಾನ, ಮಸೀದಿಗಳಿಗೆ ತೆರಳುವ ಭಕ್ತರು, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಕ್ಕೆ ತೆರಳುವ ವಿದ್ಯಾರ್ಥಿಗಳು ಬಳಸುತ್ತಾರೆ ಬಹಳ ಪ್ರಾಮುಖ್ಯತೆ ಪಡೆದ ಈ ರಸ್ತೆಗಳನ್ನು ಸ್ಥಳೀಯಾಡಳಿತ, ಸಾರ್ವಜನಿಕರು ದುರಸ್ತಿಗೆ ಮುಂದಾದರೆ ಇಲಾಖೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಅತ್ತ ಇಲಾಖೆಯೂ ದುರಸ್ತಿಪಡಿಸುತ್ತಿಲ್ಲ. ಹಾಗಾಗಿ ರಸ್ತೆ ಸಂಚಾರ ಶೋಚನೀಯವಾಗಿದೆ. ಪ್ರಸ್ತುತ ಮಳೆಗಾಲದಲ್ಲಿ ಯಾವುದೆ ವಾಹನಗಳು ಇತ್ತ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು. ಇದಕ್ಕೆ ಧ್ವನಿಗೂಡಿಸಿದ ಅಬ್ದುಲ್ ಕುಂಞ, ಬಾಬು, ಅಬ್ದುಲ್ ರಜಾಕ್ ಸೇರಿದಂತೆ ಗ್ರಾಮಸ್ಥರು ಗ್ರಾಮ ಸಭೆಯನ್ನು ಮೊಟಕುಗೊಳಿಸಿ ಅಧಿಕಾರಿಗಳು ಜನಪ್ರತಿನಿಧಿಗಳು ಪರಿಶೀಲನೆ ನಡೆಸಬೇಕು ಎಂದು ಪಟ್ಟು ಹಿಡಿದರು. ರೈತ ಮುಖಂಡ ಬಡಿಲ ಈಶ್ವರ ಭಟ್ ಮಾತನಾಡಿ, ಈ ಸಮಸ್ಯೆಯ ಪರಿಹಾರಕ್ಕೆ ಸ್ಥಳಿಯಾಡಳಿತದಿಂದ ಜಿಲ್ಲಾಧಿಕಾರಿಯರಿಗೆ ಬರೆದುಕೊಳ್ಳುವ ಎಂದರು. ಈ ಮದ್ಯೆ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಿ ಹಲವು ವರ್ಷಗಳಿಂದ ರಸ್ತೆ ಅಬಿವೃದ್ದಿಗೆ ಇಲಾಖೆ ಜೊತೆ ಮಾತುಕತೆ ನಡೆಸಿದರೂ ಇಲಾಖೆಯಿಂದ ಯಾವೂದೆ ಸ್ಪಂದನೆ ಸಿಗುತ್ತಿಲ್ಲ. ಇತ್ತೀಚೆಗೆ ಕೊೈಲದಲ್ಲಿ ಪಶುವೈದ್ಯಕೀಯ ಕಾಲೇಜು ಶಂಕುಸ್ಥಾಪನೆಗೆ ಆಗಮಿಸಿದ್ದಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಶುಸಂಗೋಪಾನ ಇಲಾಖಾ ಸಚಿವರಿಗೂ ದೂರು ನೀಡಲಾಗಿದೆ ಆದರೆ ಮುಖ್ಯಮಂತ್ರಿಗಳು ಮತ್ತು ಸಚಿವರು ಇಲಾಖಾ ಪರವಾಗಿಯೇ ಮಾತನಾಡಿದ್ದಾರೆ. ಸಮಸ್ಯೆ ಜೀವಂತವಾಗಿದೆ. ಪರಿಹಾರಕ್ಕೆ ಸರಕಾರವೇ ಮುಂದಾಗಬೇಕಿದೆ. ಪ್ರಸ್ತುತ ಸರಕಾರದ ಪಶುಸಂಗೋಪಾನ ಇಲಾಖಾ ಸಚಿವರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಮನವರಿಕೆ ಮಾಡಬೇಕು. ನ್ಯಾಯಕ್ಕಾಗಿ ಹೋರಾಟ ಸಮಿತಿಯನ್ನು ರಚಿಸಿಕೊಂಡು ಪ್ರತಿಭಟಿಸುವ ಎಂದಾಗ ಗ್ರಾಮ ಪಂಚಾಯಿತಿ ಜನಪ್ರತಿನಿದಿಗಳು ಗ್ರಾಮಸ್ಥರು ಒಕ್ಕೊರಳಿನಿಂದ ದ್ವನಿಗೂಡಿಸಿದರು.
ಇನ್ನೊಂದು ದಿನ ನಿಗದಿಪಡಿಸಿ ಹೋರಾಟ ಸಮಿತಿಯನ್ನು ರಚಿಸುವ ನಾನು ನಿಮ್ಮ ಜೊತೆಯಾಗಿದ್ದು ನಿಮ್ಮ ಬೆಂಬಲಕ್ಕಿದ್ದೇನೆ ಸಭೆ ನಡೆಸಲು ಅನುವು ಮಾಡಿಕೊಡಿ ಎಂದು ಪಟ್ಟು ಹಿಡಿದ ಗ್ರಾಮಸ್ಥರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಕೇಳಿಕೊಂಡರು. ಇದಕ್ಕೆ ಸ್ಪಂದನೆ ನೀಡದ ಪ್ರತಿಭಟನಕಾರರು ಸ್ಥಳ ಪರಿಶೀಲನೆಗೆ ತಕ್ಷಣ ಹೊರಡುವ ಎಂದರು. ಈ ಮದ್ಯೆ ಮಾತನಾಡಿದ ಮಮತಾ ಆನೆಗುಂಡಿ ಪಶು ಸಂಗೋಪಾನ ಇಲಾಖಾ ಅಧಿಕಾರಿಗಳು ಸಭೆಗೆ ಬರುವಂತೆ ಆಗ್ರಹಿಸಿದರು. ಅಂತೆಯೇ ಅದ್ಯಕ್ಷೆ ಹೇಮಾ ಎಂ ಶೆಟ್ಟಿ ದೂರವಾಣಿ ಮೂಲಕ ಸಂಪರ್ಕಿಸಿ ಅದಿಕಾರಿಗಳನ್ನು ಸಭೆಗೆ ಕರೆಸಿಕೊಂಡರು. ಪಶುಸಂಗೋಪಾನ ಇಲಾಖಾ ಉಪನಿರ್ದೇಶಕ ಡಾ. ಹರೀಶ್, ಕಛೇರಿ ಅದಿಕ್ಷಕಿ ರೂಪ, ಪಶುವೈದ್ಯದಿಕಾರಿ ಡಾ.ಭಾಗ್ಯ ಸಬೆಗೆ ಹಾಜರಾದರು, ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದ ಡಾ.ಹರೀಶ್ . ಇಲಾಖಾ ಜಾಗದಲ್ಲಿನ ರಸ್ತೆಗಳ ದುರಸ್ತಿಗೆ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸುವ ಸಲುವಾಗಿ ಅಂದಾಜು ಪಟ್ಟಿ ತಯಾರಿಸಲು ಈಗಾಗಲೇ ಮುಂದಾಗಿದ್ದೇವೆ. ಎಂದಾಗ ಅಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ದುರಸ್ತಿ ಮಾಡಲು ಸ್ಥಳಯಾಡಳಿಕ್ಕೆ ಅನುಮತಿ ನೀಡಿ ಎಂದರು. ಸರಕಾರ ಮಟ್ಟದಲ್ಲಿ ಅನುದಾನ ಬಿಡುಗಡೆಯಾದರೆ ಇಲಾಖೆಯೇ ದುರಸ್ತಿ ಮಾಡುತ್ತೇವೆ. ಸ್ಥಳಿಯಾಡಳಿತಕ್ಕೆ ಅನುಮತಿ ನೀಡಲು ಇಲಾಖಾ ಕಾನೂನು ಪ್ರಕಾರ ಸಾದ್ಯವಿಲ್ಲ ಎಂದು ಅದಿಕಾರಿ ತಿಳಿಸಿದಾಗ ಗ್ರಾಮಸ್ಥರು ಸಭಾಂಗಣದ ಮುಂಬಾಗಕ್ಕೆ ಬಂದರು ಆಗ ಗೊಂದಲದ ವಾತವರಣ ನಿರ್ಮಾಣವಾಯಿತು. ಸಭೆಗೆ ಮಾಹಿತಿ ನೀಡಲು ಬಂದ ಕಡಬ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಪ್ಪ, ರಮೇಶ್ ಅವರುಗಳು ನಿಯಂತ್ರಣಕ್ಕೆ ತರಲು ಮುಂದಾದರೂ ಸಾದ್ಯವಾಗಿಲ. ಚರ್ಚಾ ನಿಯಂತ್ರಣಾಕಾರಿ , ಅದ್ಯಕ್ಷೆ ಹೇಮಾ ಎಂ ಶೆಟ್ಟಿ , ಮಾಜಿ ಅದ್ಯಕ್ಷ ಶೀನಪ್ಪ ಗೌಡ ವಳಕಡಮ, ಪ್ರತಿಭಟನೆ ನಿರತ ಗ್ರಾಮಸ್ಥರಲ್ಲಿ ಸಭೆ ಮುನ್ನಡೆಸಲು ಮನವಿ ಮಾಡಿಕೊಂಡರೂ ಯಾವೂದೆ ಪ್ರಯೋಜನವಾಗಿಲ್ಲ. ಬಳಿಕ ಸಬೆಯ ಮದ್ಯೆಯೆ ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ, ಪಂಚಾಯಿತಿ ರಾಜ್ ಇಲಾಖಾ ಕಿರಿಯ ಇಂಜಿನಿಯಾರ್ ಸಂದೀಪ್ ಪ್ರತಿಭಟನಕಾರರೊಂದಿಗೆ ಹದಗೆಟ್ಟ ರಸ್ತೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತುರ್ತು ಕಾಮಾಗರಿ ನಡೆಸುವ ಭರವಸೆ ನೀಡಿದರು. ಇತ್ತ ಸಭಾಂಗಣದಲ್ಲಿ ಸಭೆ ಮುಂದುವರಿಯುತ್ತಿತ್ತು. ಸಭೆಯಲ್ಲಿ ಕೆಲವು ಇಲಾಖಾ ಮಾಹಿತಿ ನೀಡಲಾಗುತ್ತಿತ್ತು. ಆ ವೇಳೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರು ಮಾತನಾಡಿ, ರಸ್ತೆ ಅಬಿವೃದ್ದಿ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಮೂಲಕ ಸರಕಾರದ ಗಮನ ಸೆಳೆಯುವ ಜಿಲ್ಲಾದಿಕಾರಯವರ ಮೂಲಕ ಸರಕರಕ್ಕೆ ಮನವಿ ಸಲ್ಲಿಸುವ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಕೆ ಎ ಸುಲೈಮಾನ್ ಮಾತನಾಡಿ, ಕೊೈಲದಲ್ಲಿ ನಿರ್ಮಾಣವಾಗುತ್ತಿರುವ ಪಶುವೈದ್ಯಕೀಯ ಕಾಲೇಜಿನ ಕಟ್ಟಡ ಕಾರ್ಮಿಕರಿಗಿದ್ದ ಶೌಚಲಯ ನಾದುರಸ್ತಿಯಲ್ಲಿದೆ. ಕಾರ್ಮಿಕರು ಬಯಲು ಶೌಚಕ್ಕೆ ಮೊರೆ ಹೊಗಿದ್ದಾರೆ. ಕಟ್ಟಡದ ಆಸುಪಾಸಿನಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿವೆ. ಸಾಂಕ್ರಮಿಕ ರೋಗ ಭೀತಿ ಎದುರಾಗಿದೆ. ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಬಳಸುವ ಮರಳು ಇತರೆ ಪರಿಕರಗಳು ಮಳೆ ನೀರಿಗೆÉ ಕೊಚ್ಚಿಕೊಂಡು ಬಂದು ರಸ್ತೆ ಚರಂಡಿ ಸೇರುತ್ತಿದೆ. ಸರಗವಾಗಿ ನೀರು ಹರಿಯಲು ಸಾದ್ಯವಾಗುತಿಲ್ಲ ಕಾರ್ಮಿಕರ ಗುತ್ತಿಗೆದಾರನಲ್ಲಿ ಈ ಬಗ್ಗೆ ತಿಳಿಸಿದರೂ ಯಾವೂದೆÉ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು. ಕಳೆದ ಬೇಸಿಗೆಯಲ್ಲಿ ಮರುಡಾಮರಿಕರಣಗೊಂಡ ಗೊಳಿತ್ತಡಿ – ನೆಲ್ಯೊಟ್ಟು ರಸ್ತೆ ಕಳಪೆಯಾಗಿದೆ. ರಸ್ತೆಯುದ್ದಕ್ಕೂ ಡಾಂಬರು ಎದ್ದು ಹೋಗಿ ಸಂಚಾರ ದುಸ್ತರವಾಗಿದೆ. ರಸ್ತೆ ಅಬಿವೃದ್ದಿಪಡಿಸಿದ ಗುತ್ತಿಗೆದಾರÀನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಬೇಕು . ಈ ರಸ್ತೆ ಸಂಬಂದಪಟ್ಟ ಇಂಜಿನಿಯಾರ್ ಸಂದೀಪ್ ಗುತ್ತಿಗೆದಾರನೊಂದಿಗೆ ಶಾಮಿಲಾಗಿದ್ದಾರೆ. ಇಂಜಿನಿಯರ್ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಅವರಲ್ಲಿ ಗ್ರಾಮಸ್ಥ ಉಮೇಶ್ ಸಂಕೇಶ ಒತ್ತಾಯಿಸಿದರು. ನಾಗೇಶ್ ಕಡೆಂಬ್ಯಾಲು, ರಾಮಚಂದ್ರ ನಾಯ್ಕ, ಶ್ರೀದರ ಪೂಜಾರಿ ತುಂಬೆತ್ತಡ್ಕ, ಸಾಂತಪ್ಪ ಗೌಡ ಕೊಲ್ಯ ದ್ವನಿಗೂಡಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರು ಕಳಪೆ ಎಂದು ಒಪ್ಪಿಕೊಳ್ಳುವುದಿಲ್ಲ ಡಾಮರಿಕರಣ ವೇಳೆ ಮಳೆ ಬಂದ ಕಾರಣ ಡಾಮರು ಎದ್ದುಹೋಗುತ್ತಿದೆ. ಗುತ್ತಿಗೆದಾರನಿಗೆ ಪೂರ್ತಿ ಹಣ ಪಾವತಿಯಾಗಿಲ್ಲ. ಮಳೆಗಾಲ ಮುಗಿದ ಬಳಿಕ ಮರುಡಾಮರಿಕರಣ ಗೊಳಿಸಲಾಗುವುದು ಎಂದು ತಿಳಿಸಿದರು. ಇಂಜಿನಿಯಾರ್ ಸಂದೀಪ್ ಮಾತನಾಡಿ, ಮಳೆಗಾಲದ ಬಳಿಕ ಮರುಡಾಮರಿಕರಣಗೊಳಿಸಲಾಗುವುದು ಎಂದರು.
ಕಂದಾಯ ಇಲಾಖೆಯಲ್ಲಿ ಲಂಚಾವತರ ಬಗ್ಗೆ ಹಲವು ದೂರುಗಳು ವ್ಯಕ್ತವಾಗುತ್ತಿದೆ ಈ ಬಗ್ಗೆ ಸಂಬಂದಪಟ್ಟವರು ಕ್ರಮಕೈಗೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ ಒತ್ತಾಯಿಸಿದರು. 94 ಸಿ ಅರ್ಜಿ ವಿಲೇವಾರಿಯಲ್ಲಿ ಸಾಕಷ್ಟು ಅವ್ಯವಾಹರಗಳು ನಡೆಯುತ್ತಿದೆ ಎಂದು ಬಾಲಕೃಷ್ಣ ಬಿ ಆರೋಪಿಸಿದರು. ಹಳೆ ವಿದ್ಯುತ್ ತಂತಿಗಳನ್ನು ಬದಲಾಯಿಸಬೇಕು ಎನ್ನುವ ಗ್ರಾಮಸ್ಥ ಬೇಡಿಕೆಗೆ ಮಾತನಾಡಿದ ಸಹಾಯಕ ಇಂಜಿನಿಯಾರ್ ರಾಜೇಶ್ , ಹಳೆ ತಂತಿಗಳ ಬದಲಾಣೆಗೆ ಈಗಾಗಲೇ ಟೆಂಡರ್ ಕರೆಯುವ ಹಂತದಲ್ಲಿದೆ. ಇನ್ನೆರಡು ತಿಂಗಳ ಒಳಗೆ ತಂತಿ ಬದಲಾಯಿಸಲಾಗುವುದು ಎಂದರು. ಸರಕಾರ ಮಾಡಿದ ಸಾಲಮನ್ನಾ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಲವಾರು ಗೊಂದಲವಿದೆ ಈ ಬಗ್ಗೆ ಬ್ಯಾಂಕಿನವರು ಸರಿಯಾದ ಮಾಹಿತಿಯನ್ನು ಪ್ರತಿ ಪಂಚಾಯಿತಿ ನಾಮಫಲಕದಲ್ಲಿ ಅಳವಡಿಸಬೇಕು. ಸುಸ್ತಿ ಮತ್ತು ಚಾಲ್ತಿ ಸಾಲಗಾರಿಗೂ ಕ ರೀತಿಯಲ್ಲಿ ಸಾಲಮನ್ನಾ ಮಾಡಬೇಕು . ಕೃಷಿಗೆ ಹಾನಿಯಾದಲ್ಲಿ ಪ್ರಕೃತಿ ವಿಕೋಪದಡಿ ಸಿಗುವ ಪರಿಹಾರ ವೈಜ್ಷಾನಿಕವಾಗಿದೆ. ಸರಕಾರ ಪರಿಶೀಲನೆ ನಡೆಸಬೇಕು ಎಂದು ರೈತ ಮುಖಂಡ ಬಡಿಲ ಈಶ್ವರ ಭಟ್ ಒತ್ತಾಯಿಸಿದರು. ಇದಕ್ಕೆ ಬಾಲಕೃಷ್ಣ ಗೌಡ ಬಿ ದ್ವನಿಗೂಡಿಸಿದರು. ಕಡಬ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಪ್ಪ, ರಮೇಶ್ ಮಾಹಿತಿ ನೀಡಿ ಜನಸ್ನೇಹಿ ಪೊಲೀಸ್ ಗೆ ಗ್ರಾಮಸ್ಥರು ಬೆಂಬಲ ಸೂಚಿಸಿಬೇಕು. ಪರಿಸರದಲ್ಲಿ ಅಪರಿಚಿತರು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದರು.
ಎಂದಿನಂತೆ ಸಭೆ ಬೆಳಿಗ್ಗೆ 10.30 ಕ್ಕೆ ನಿಗದಿತ ಗಂಟೆಗೆ ಪ್ರಾರಂಭವಾದರೂ ಮುಗಿಯುವಾಗ 3 ಗಂಟೆಯಾಗಿತ್ತು.. ಸಭೆಯ ಅರ್ದ ಭಾಗ ರಸ್ತೆ ದುರಸ್ತಿಯ ಬಗೆಗಿನ ವಿಚಾರ ಪ್ರಸ್ತಾವಾಗಿ ಗೊಂದಲಮಯವಾಗಿತತು. ಕೊೈಲ ಗ್ರಾಮದ ಗ್ರಾಮ ಸಭೆಯ ಇತಿಹಾಸದಲ್ಲಿ ಇಷ್ಟೋಂದು ದೀರ್ಘ ಸಮಯದ ಸಭೆ ಎಂದು ಹೇಳಲಾಗಿತ್ತು. ವಿವಿದ ಇಲಾಖಾಕಾದಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಜಯ ಅಂಬಾ, ಸದಸ್ಯರಾದ ಹರಿಣಿ, ನಝೀರ ಪೂರಿಂಗ, ಬಿಪಾತುಮ್ಮ, ಸುಜಾತ, ಪ್ರೇಮಾ, ಲಿಂಗಪ್ಪ ಕುಂಬಾರ, ವಿನೋದರ ಮಾಳ, ಮೀನಾಕ್ಷಿ ಬಿ, ಸುಂದರ ನಾಯ್ಕ, ತಿಮ್ಮಪ್ಪ ಗೌಡ ಸಂಕೇಶ ಉಪಸ್ಥಿತರಿದ್ದರು. ಪಂಚಾಯಿತಿ ಅಬಿವೃದ್ದಿ ಅದಿಕಾರಿ ನಮಿತಾ ವರದಿ ಮಂಡಿಸಿ ಸ್ವಾಗತಿಸಿದರು.