(ನ್ಯೂಸ್ ಕಡಬ) newskadaba.com ಸವಣೂರು, ಜು.21. ಮಂಗಳೂರಿನ ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ ಪುತ್ತೂರು ಘಟಕದ ಹತ್ತನೆ ಮಾಸಿಕ ಸಹಾಯ ಯೋಜನೆಯಡಿಯಲ್ಲಿ ಬಡ ಮತ್ತು ಕ್ಕಾಗಿ ಸಹಾಯದ ಅಂಗವಾಗಿ ಎರಡನೇ ದತ್ತು ಯೋಜನೆಯಾಗಿ ಪುತ್ತೂರು ತಾಲೂಕಿನ ಗೋಳಿತ್ತಡಿ ನಡುಕೂಟೇಲು ಸಂಜೀವ ಪೂಜಾರಿಯವರ ಪುತ್ರಿ ನವ್ಯಶ್ರೀ ಮತ್ತು ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಜತ್ತಪ್ಪರವರ ಪುತ್ರಿ ಪೂಜಾ ಅವರಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರುಗಳ ವಿಧ್ಯೆಯಿಂದ ಸ್ವತಂತ್ರರಾಗಿ ತತ್ವದಡಿಯಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ ಆಯ್ದ ಮಕ್ಕಳಿಗೆ ಸಹಾಯವನ್ನು ನೀಡಲಾಗುತ್ತಿದೆ. ಇದು ಮುಂದುವರೆದ ಯೋಜನೆಯಾಗಿದ್ದು ಪ್ರತೀ ವರ್ಷ ಆಯ್ದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಅವರು ವಿದ್ಯಾಭ್ಯಾಸ ಮುಗಿಯವರೆಗೆ ನೀಡುವ ಯೋಜನೆಯಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದರು. ಆರ್ಥಿಕ ಸಹಾಯವನ್ನು ಆಲಂಕಾರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ದಯಾನಂದ ಕರ್ಕೇರ ವಿಧ್ಯಾರ್ಥಿನಿಗೆ ಹಸ್ತಾಂತರಿಸಿದರು. ಪೂಜಾ ಅವರಿಗೆ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ವಿಧ್ಯಾರ್ಥಿನಿಗೆ ಹಸ್ತಾಂತರಿಸಿದರು. ಬಿರುವೆರ್ ಕುಡ್ಲ ಪುತ್ತೂರು ಘಟಕದ ಅಧ್ಯಕ್ಷ ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ, ಪ್ರಧಾನ ಕಾರ್ಯದರ್ಶಿ ತೇಜಸ್ ಬಿರ್ವ ಕೇಪುಳು, ಸದಸ್ಯರಾದ ಅಭಿಮಾನ್ ಉಪಸ್ಥಿತರಿದ್ದರು.