ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆ ರಕ್ಷಕ  ಶಿಕ್ಷಕ ಸಂಘದ ರಚನೆ ► ಅಧ್ಯಕ್ಷರಾಗಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಮೈಮುನ್ನೀಸಾ ಪುನರಾಯ್ಕೆ

(ನ್ಯೂಸ್ ಕಡಬ) newskadaba.com ಸವಣೂರು, ಜು.21. ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆಯ  ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಮರ್ದಾಳ ಗ್ರಾ.ಪಂ ಮಾಜಿ ಅಧ್ಯಕ್ಷೆ ಮೈಮುನ್ನೀಸಾ ಪುನರಾಯ್ಕೆಗೊಂಡರೆ ಉಪಾಧ್ಯಕ್ಷರಾಗಿ ತಮ್ಮಯ್ಯ ಗೌಡ ಬೆತ್ತೋಡಿ ಆಯ್ಕೆಯಾಗಿರುತ್ತಾರೆ.

ಸಂಸ್ಥೆಯ ಸಂಚಾಲಕರಾದ ರೆ|ಫಾ ಜೋಸ್ ವಿ.ಸಿ ಅಧ್ಯಕ್ಷತೆಯಲ್ಲಿ ಜು.18 ರಂದು ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಳಿದಂತೆ ಸಮಿತಿ ಸದಸ್ಯರಾಗಿ, ವೀರಪ್ಪ ಗೌಡ ಮೇಪತಪಾಲು, ಶಾಂತಿ ಪಾಲೆತ್ತಡ್ಕ, ನಾಗೇಶ ಗೌಡ ಕೋಕಳ, ಕೇಶವ ಗೌಡ ಶೆಟ್ಟಿಪಾಲು, ಭಾಗೀರಥಿ ಶಿವಾಜಿನಗರ, ಪುಷ್ಪಾವತಿ ಪಾದೆಮಜಲು, ಸರೋಜ ಕೊಂಬಾರುಗದ್ದೆ, ಪ್ರೇಮಾ ಕೊಂಬಾರು, ಲಕ್ಷೀ ಬೀಡುಮುಲೆ, ಕಮಲ, ಲತಾ ಕೊಂಬಾರುಗದ್ದೆ, ಬಾಲಕೃಷ್ಣ ಬೊಳ್ಳಂತಡ್ಕ, ಅಜಿತ್, ಬಾಲಕೃಷ್ಣ ಕೊಡೆಂಕೀರಿ, ಕೊರಗಪ್ಪ ಗೌಡ ಕಲ್ಲಾಜೆ, ವಸಂತ ಕೇನ್ಯ, ಆಯ್ಕೆಗೊಂಡಿರುತ್ತಾರೆ.

Also Read  ನೇತ್ರ ಪರೀಕ್ಷಾ ಶಿಬಿರ

error: Content is protected !!
Scroll to Top