(ನ್ಯೂಸ್ ಕಡಬ) newskadaba.com ಮೈಸೂರು, ಜು.17. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಹರಿವು ಹೆಚ್ಚಾಗಿದ್ದು, ಸುಮಾರು 200 ವರ್ಷದಷ್ಟು ಹಳೆಯ ವೆಲ್ಲೆಸ್ಲಿ ಸೇತುವೆಯು ಕೊಚ್ಚಿ ಹೋಗಿದೆ.
1799ರ ಸುಮಾರಿಗೆ ಕರ್ನಲ್ ಆರ್ಥೂರ್ ವೆಲ್ಲೆಸ್ಲಿಯು ಕೊಳ್ಳೆಗಾಲ ತಾಲೂಕಿನ ಸತ್ಯಗಾಲ ಸಮೀಪ ನಿರ್ಮಿಸಿದ್ದರೆನ್ನಲಾದ ವೆಲ್ಲೆಸ್ಲಿ ಸೇತುವೆಯು ಕಬಿನಿ ಮತ್ತು ಕೆಆರ್ ಎಸ್ ಜಲಾಯಶಯಗಳಿಂದ ನೀರು ಹರಿಸಿದ ಪರಿಣಾಮ ಕೊಚ್ಚಿ ಹೋಗಿದೆ. ತುಂಬಾ ಹಳೆಯದಾದ ಕಾರಣ ಶಿಥಿಲಗೊಂಡಿದ್ದ ಸೇತುವೆಯನ್ನು ಪುನರ್ ಸ್ಥಾಪಿಸಬೇಕು ಎಂದು ಈ ಹಿಂದೆ ನಾಗರಿಕರು ಆಗ್ರಹಿಸಿದ್ದರಾದರೂ ಅದು ನನೆಗುದಿಗೆ ಬಿದ್ದಿತ್ತು.