ಬೆಳ್ಳಾರೆ: ಪದವಿ ಪೂರ್ವ ಕಾಲೇಜಿನ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಕಳ್ಳತನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.17. ಇಲ್ಲಿನ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕೊಠಡಿಯ ಒಳನುಗ್ಗಿರುವ ಕಳ್ಳರು ಲ್ಯಾಪ್ ಟಾಪ್ ಹಾಗೂ ಪ್ರೊಜೆಕ್ಟರನ್ನು ಹೊತ್ತೊಯ್ದಿದ್ದಾರೆ.

ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗಿನ ನಡುವೆ ಒಳ ನುಗ್ಗಿರುವ ಕಳ್ಳರು 13,000/- ರೂಪಾಯಿ ಮೌಲ್ಯದ ಪ್ಯಾನಾಸೋನಿಕ್ ಕಂಪೆನಿಯ ಪ್ರೊಜೆಕ್ಟರ್ ಮತ್ತು ಸುಮಾರು 10,000/- ರೂಪಾಯಿ ಮೌಲ್ಯದ ಆಸಸ್ ಕಂಪೆನಿಯ ಲ್ಯಾಪ್ ಟಾಪ್ ಸೇರಿ ಒಟ್ಟು ರೂಪಾಯಿ 23,000 ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ. ಸೋಮವಾರದಂದು ಉಪನ್ಯಾಸಕರು ಕಾಲೇಜಿಗೆ ಆಗಮಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಉಮಾ ಕುಮಾರಿ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ   ➤ ರಾಜ್ಯಾದ್ಯಂತ 265 ಕೋಟಿ ರೂ. ನಗದು, ವಸ್ತುಗಳು ಜಪ್ತಿ.!

error: Content is protected !!
Scroll to Top