ರಾಮಕುಂಜ: ಸರಕಾರಿ ಬಸ್ಸುಗಳಿಲ್ಲದ ಕಾರಣ ವಿದ್ಯಾರ್ಥಿಗಳಿಂದ ರಾಜ್ಯ ಹೆದ್ದಾರಿ ತಡೆ ► ಪ್ರತಿಭಟನೆಗೆ ಮಣಿದ ಕೆಎಸ್ಸಾರ್ಟಿಸಿಯಿಂದ 3 ಹೆಚ್ಚಿನ ಬಸ್ಸುಗಳ ಓಡಾಟ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಜು.17. ಸಮಯಕ್ಕೆ ಸರಿಯಾಗಿ ಬಸ್ಸು ಸೌಲಭ್ಯ ದೊರೆಯುತ್ತಿಲ್ಲ ಆರೋಪಿಸಿ ಎಬಿವಿಪಿ ರಾಮಕುಂಜ ಘಟಕದ ವತಿಯಿಂದ ಶ್ರೀ ರಾಮಕುಂಜೇಶ್ವರ  ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸೋಮವಾರ ಸಾಯಂಕಾಲ ರಾಮಕುಂಜ ಕ್ರಾಸ್ ಬಳಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

    ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆಯ ಪದವಿ, ಪದವಿಪೂರ್ವ, ಪ್ರೌಢಶಾಲಾ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು ಹದಿನೈದು ನಿಮಿಷ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ಸಂದರ್ಭ ಎಬಿವಿಪಿ ರಾಮಕುಂಜ ಕಾಲೇಜು ಘಟಕದ ಜೊತೆ ಕಾರ್ಯದರ್ಶಿ ಮೋಹನ್ ಕೆ, ವಿದ್ಯಾರ್ಥಿನಿ ಸುಷ್ಮಾ ಮಾತನಾಡಿ, ಕಳೆದ ತಿಂಗಳಿನಿಂದ ಬೆಳಿಗ್ಗೆ ಹಾಗೂ ಸಾಯಂಕಾಲ ಸಮಯಕ್ಕೆ ಸರಿಯಾಗಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಹೆದ್ದಾರಿ ರಸ್ತೆಯಲ್ಲಿ ಬಸ್ಸು ವ್ಯವಸ್ಥೆಯಿಲ್ಲ. ಈ ರಸ್ತೆಯಲ್ಲಿ ಓಡಾಡುವ ಮಂಗಳೂರು ಡಿಪೊದ ಬಸ್ಸುಗಳು ನಿಗದಿತ ನಿಲುಗಡೆಗೊಳ್ಳುವುದರಿಂದ ಗ್ರಾಮೀಣ ಭಾಗಕ್ಕೆ ತೆರಳುವ ವಿದ್ಯಾರ್ಥಿಗಳು ಪ್ರಯಾಣಿಸಲು ಸಾದ್ಯವಾಗುತ್ತಿಲ್ಲ ಇಂತಹ ಬಸ್ಸುಗಳಿಗೆ ವಿದ್ಯಾರ್ಥಿ ಪಾಸ್ ಅನ್ವಯವಾಗುವುದಿಲ್ಲ ಎಂದು ನಿರ್ವಾಹಕರು ತಿಳಿಸುತ್ತಾರೆ. ಈ ಬಗ್ಗೆ ಸಾರಿಗೆ ಇಲಾಖೆಯಲ್ಲಿ ದೂರಿಕೊಂಡರೆ ಅದಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಬಸ್ಸು ಇಲ್ಲದೆ ಖಾಸಗಿ ವಾಹನದಲ್ಲಿ ತೆರಳುವ ಸನ್ನಿವೇಶ ನಿರ್ಮಾಣವಾಗಿದೆ . ಪುತ್ತೂರು  ಡಿಪೋದ ಬಸ್ಸುಗಳು ಬೆರಳಿಣಿಕೆಯಷ್ಟಿದೆ ಹಾಗಾಗಿ ಸಮಯಕ್ಕೆ ಸರಿಯಾಗಿ ತರಗತಿ ತೆರಳಲು ಮತ್ತು ಮನೆಗೆ ವಾಪಸ್ಸಾಗಲು ತೊಂದರೆಯಾಗುತ್ತದೆ. ಕಡಬ, ಸುಬ್ರಹ್ಮಣ್ಯ, ಆಲಂಕಾರು, ಪೆರಿಯಡ್ಕ, ಪುಳಿತ್ತಡಿ , ಕೆಮ್ಮಾರ, ಉಪ್ಪಿನಂಗಡಿ ಪ್ರದೇಶದ ತೀರಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಮಕುಂಜೇಶ್ವರ ವಿದ್ಯಾ ಸಂಸ್ಥೆಯಲ್ಲಿ ಅಭ್ಯಸಿಸುತ್ತಾರೆ. ಸೆಟಲ್ ಮತ್ತು ಹೆಚ್ಚುವರಿ ಬಸ್ಸು ಸೌಲಬ್ಯವಿಲ್ಲದೆ ಇವರಿಗೆಲ್ಲ ತುಂಬಾ ತೊಂದರೆಯಾಗುತ್ತಿದೆ. ಸಾಯಂಕಾಲ 3.30 ರ ಬಳಿಕ ಮತ್ತು ಬೆಳಿಗ್ಗೆ 7 ಗಂಟೆ ಬಳಿಕ ಹದಿನೈದು ನಿಮಿಷಕ್ಕೊಂದು ಸೆಟಲ್ ಬಸ್ಸು ಬೇಕು ಈ ಬಗ್ಗೆ ಸಂಬಂದಪಟ್ಟವರು ತಕ್ಷಣ ಕ್ರಮಕೈಗೊಳ್ಳಬೇಕು.  ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಕಡಬದ ಸಂಚಾರ ನಿಯಂತ್ರಣಾಧಿಕಾರಿ ವಸಂತ ಪ್ರತಿಭಟನೆ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿ, ಮಂಗಳವಾರದಿಂದ ಎರಡು ಹೆಚ್ಚುವರಿ ಬಸ್ಸುಗಳು ಓಡಾಡುತ್ತವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಬಸ್ಸು ಓಡಾಟಕ್ಕೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆ ನಿಡಿದ್ದರು. ಅದರಂತೆ ಮಂಗಳವಾರದಿಂದ ಹೆಚ್ಚುವರಿಯಾಗಿ 3 ಬಸ್ಸುಗಳ ಓಡಾಟವನ್ನು ಆರಂಭಿಸಲಾಗಿದೆ ಎಂದು ‘ನ್ಯೂಸ್ ಕಡಬ’ಕ್ಕೆ ತಿಳಿಸಿದ್ದಾರೆ.  ಇದೇ ಸಂದರ್ಭ ಮಾತನಾಡಿದ ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್ ಕೆ,  ಬಿಜೆಪಿ ಮುಖಂಡ ಲಕ್ಷ್ಮೀ ನಾರಾಯಣ ರಾವ್ ಆತೂರು ಮಾತನಾಡಿ, ಇತ್ತಿಚಿನ ಕೆಲವು ತಿಂಗಳಿನಿಂದ ಮಂಗಳೂರು ಡಿಪೊದಿಂದ ಸುಬ್ರಹ್ಮಣ್ಯಕ್ಕೆ ತೆರಳುವ  ಬಸ್ಸುಗಳು ಎಲ್ಲವೂ ಎಕ್ಸ್‍ಪ್ರೆಸ್ ಆಗಿದೆ. ದರವೂ ಹೆಚ್ಚವರಿಯಾಗಿದೆ ತಕ್ಷಣ ದರ ಇಳಿಸಿ ಸೆಟ್‍ಲ್ ಬಸ್ಸು  ಪರಿವರ್ತಿಸಿ ಇಲ್ಲವಾದಲ್ಲಿ ಉಗರ ಪ್ರತಿಭಟನೆ ಮಾಡಲಾಗುವುದು ಎಚ್ಚರಿಸಿದರು. ಈ ಬಗ್ಗೆ ಮೇಲಾದಿಕಾರಿಗಳಿಗೆ ತಿಳಿಸಲಾಗುವುದು ಎಂದು ವಸಂತ ತಿಳಿಸಿದರು.
error: Content is protected !!
Scroll to Top