ಉಪ್ಪಿನಂಗಡಿ: ದಂಪತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು.17. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ದಂಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಮೃತ ದಂಪತಿಯನ್ನು ಬಾರ್ಯ ಗ್ರಾಮದ ಪಿಳಿಗೂಡು ನಿವಾಸಿ ಸಂಜೀವ ಪೂಜಾರಿ (60) ಹಾಗೂ ಸೀತಾ (59) ಎಂದು ಗುರುತಿಸಲಾಗಿದೆ. ಸಂಜೀವ ಪೂಜಾರಿಯವರು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿ ಕೆಲಸಕ್ಕೆ ಹೋಗಲು ಅಸಮರ್ಥರಾಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದ ದಂಪತಿ ಸೋಮವಾರದಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Also Read  ಮರ್ಧಾಳ: ಕಾರುಗಳ ಓವರ್‌ಟೇಕ್ ಭರದಲ್ಲಿ ರಸ್ತೆ ಪಕ್ಕ ಸಿಲುಕಿಕೊಂಡ ಕೆಎಸ್ಸಾರ್ಟಿಸಿ ಬಸ್ ➤‌ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ

error: Content is protected !!
Scroll to Top