ನೆಲ್ಯಾಡಿ: ವಿವಾಹಿತ ಮಹಿಳೆ ಹಾಗೂ ಮಕ್ಕಳಿಬ್ಬರ ಅಪಹರಣ ► ಆರೋಪಿ ಕಡಬ ನಿವಾಸಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.16. ವಿವಾಹಿತ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದ ಪ್ರಕರಣವನ್ನು ಭೇದಿಸಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ನಿವಾಸಿ ತೊಮಸ್. ಪಿ.ಕೆ. ಎಂಬವರ ಪುತ್ರ ಅನಿಲ್ ಎಂದು ಗುರುತಿಸಲಾಗಿದೆ. ನೆಲ್ಯಾಡಿ ಮೂಲದ ಮಹಿಳೆಯು ಜುಲೈ 11 ರಂದು ತನ್ನ ಇಬ್ಬರು ಮಕ್ಕಳನ್ನು ವಿಟ್ಲ ಸಮೀಪದ ಶಾಲೆಯೊಂದಕ್ಕೆ ಸೇರಿಸಲೆಂದು ತೆರಳಿದ್ದ ವೇಳೆ ಆರೋಪಿಯು ಮಕ್ಕಳ ಸಹಿತ ಮಹಿಳೆಯನ್ನು ಅಪಹರಿಸಿದ್ದಾನೆಂದು ಮಹಿಳೆಯ ಪತಿ ರಾಜೇಶ್ ಕಡಬ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ಕಡಬ ಪೊಲೀಸರು ಸೋಮವಾರದಂದು ಮಹಿಳೆ ಹಾಗೂ ಮಕ್ಕಳನ್ನು ಹಾಸನದಲ್ಲಿ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.

Also Read  ಉಳ್ಳಾಲ: ವಸತಿನಿಲಯ ತಲುಪಲು ಕತ್ತಲಲ್ಲಿ ವಿದ್ಯಾರ್ಥಿನಿಯರ ಪರದಾಟ ➤ ತುರ್ತು ಪರಿಹಾರಕ್ಕೆ ಸ್ಥಳೀಯರ ಆಗ್ರಹ

error: Content is protected !!
Scroll to Top