ಆತೂರು ಪರಿಸರದಲ್ಲಿ ಭಾರೀ ಸುಂಟರಗಾಳಿ ► ರಸ್ತೆಗಡ್ಡವಾಗಿ ಬಿದ್ದ ಮರಗಳು – ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.14. ಅತೂರು ಪರಿಸರದಲ್ಲಿ ಬೀಸಿದ ಭಾರೀ ಸುಂಟರಗಾಳಿಗೆ ಹಲವು ಮರಗಳು ಧರಾಶಾಹಿಯಾಗಿ ರಸ್ತೆ ಸಂಚಾರಕ್ಕೆ ತಡೆಯಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಪರಿಸರದ ಗೋಳಿತ್ತಡಿ, ನೇಲ್ಯೊಟ್ಟು, ಅಂಬಾ, ಆಯಿಷಾ ಸ್ಕೂಲ್ ಹಾಗೂ ಕುಂಡಾಜೆ ಪರಿಸರದಲ್ಲಿ ಬೀಸಿದ ಭಾರೀ ಗಾಳಿಗೆ ಹಲವು ಮರಗಳು ನೆಲಕ್ಕುರುಳಿವೆ. ಪರಿಣಾಮ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆಯುಂಟಾಗಿ ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಯಿತು. ತಕ್ಷಣವೇ ಸ್ಥಳೀಯ ಯುವಕರು ಸೇರಿ ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

Also Read  ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ ವಿಮೆ ಲಾಭ ಪಡೆಯಲು ಸೂಚನೆ

error: Content is protected !!
Scroll to Top