ಕಡಬ: ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿರುವ ಕಾರು

(ನ್ಯೂಸ್ ಕಡಬ) newskadaba.com ಕಡಬ,ಜು.14. ಕಡಬ ಪ್ಭೆಟೆಯ ಹೃದಯ ಭಾಗದ ಕೂಗಳತೆ ದೂರದಲ್ಲಿ ಉಪ್ಪಿನಂಗಡಿ-ಕಡಬ-ಸಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿ ಕಾರೊಂದನ್ನು ವಾರಸುದಾರರು ಬಿಟ್ಟು ಹೋಗಿ ಅನಾಥವಾಗಿ ನಿಂತಿದೆ.

ಕಡಬ ಸೈಂಟ್ ಆ್ಯನ್ಸ್ ಶಾಲಾ ಬಳಿಯಲ್ಲಿರುವ ಮಾರುತಿ 800 ಕಾರು ಕಳೆದ ಹತ್ತು ದಿನಗಳಿಂದ ಇದ್ದ ಸ್ಥಳದಲ್ಲೇ ಇದೆ. ಯಾರೂ ಅಕ್ರಮ ವ್ಯವಹಾರಕ್ಕೆ ಬಳಸಿ ಅಲ್ಲೇ ಬಿಟ್ಟು ಹೋಗಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ. ಇದೇ ವೇಳೆ ಠಾಣಾ ದಕ್ಷಿಣ ಭಾಗದ ಕಳಾರ ಎಂಬಲ್ಲಿ ಕೂಡಾ ಕಾರೊಂದು ಕಳೆದ ಕೆಲವು ದಿನಗಳಿಂದ ನಿಂತಿದ್ದು. ಈ ಬಗ್ಗೆ ಕೂಡಾ ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ. ಈ ಬಗ್ಗೆ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಅವರನ್ನು ಕೇಳಿದರು. ಎರಡೂ ಕಾರುಗಳನ್ನು ಠಾಣೆಗೆ ತಂದಿಡಲಾಗುವುದು ಎಂದು ತಿಳಿಸಿದ್ದಾರೆ.

Also Read  ಪದವಿ ಶಿಕ್ಷಣಕ್ಕೆ ಹಣದ ಕೊರತೆಯೇ...? ಕಡಬ ಏಮ್ಸ್‌ ಕಾಲೇಜಿನಲ್ಲಿ ಉಚಿತ ಶಿಕ್ಷಣ

error: Content is protected !!
Scroll to Top