ಬೆಳಂದೂರು: ದಿ| ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ

(ನ್ಯೂಸ್ ಕಡಬ) newskadaba.com ಬೆಳಂದೂರು,ಜು.14. ಕರಾವಳಿ ಭಾಗ ಅನೇಕ ಹೊಸತನಗಳ ತವರೂರಾಗಿದ್ದರೂ ಕರಾವಳಿಯ ಕೃಷಿ ಇಂದು ಪಲ್ಲಟಕ್ಕೆ ಒಳಗಾಗುತ್ತಿದೆ, ಜನತೆ ಕೃಷಿ ಪರಂಪರೆಗೆ ಬೆನ್ನು ಹಾಕಿ ದೂರ ಹೋಗುತ್ತಿದ್ದಾರೆ, ವಾಸ್ತವದಲ್ಲಿ ಹಳ್ಳಿಯ ಕೃಷಿ ಬದುಕಿಗಿಂತ ಸೊಗಸಾದ ಬದುಕು ಇನ್ನೊಂದು ಇರಲಾರದು ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ, ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಅವರು ಶುಕ್ರವಾರ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಗುಣಮಟ್ಟ ಭರವಸಾ ಕೊಶ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ ದಿ. ಮಂಜುನಾಥ ಶೆಟ್ಟಿ ಮಲಾರಬೀಡು ಸಭಾಭವನದಲ್ಲಿ ನಡೆದ ದಿ| ಸಿ.ಪಿ. ಜಯರಾಮ ಗೌಡ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ದಕ್ಷಿಣ ಕನ್ನಡದ ಕೃಷಿ ಪರಂಪರೆ, ಅವಕಾಶಗಳು ಮತ್ತು ಸವಾಲುಗಳು’ ಎಂಬ ಬಗ್ಗೆ ಉಪನ್ಯಾಸ ನೀಡಿದರು.


ನಮ್ಮ ಹಿರಿಯರು ಮಾಡುತ್ತಿದ್ದ ಕೃಷಿಗೂ ಇಂದಿನ ಕೃಷಿಗೂ ವ್ಯತ್ಯಾಸ ಕಂಡು ಬರುತ್ತಿದೆ, ಅವರು ಅನಕ್ಷರಸ್ಥರಿದ್ದರೂ ಎಲ್ಲವನ್ನೂ ಚೆನ್ನಾಗಿ ಬಲ್ಲವರಾಗಿದ್ದರು. ಆದರೆ ಆಧುನಿಕ ಕೃಷಿ ಪದ್ಧತಿಯಲ್ಲಿ ಹಿರಿಯರ ಕಾಲದ ಕಲಾತ್ಮಕತೆ, ನೈಪುಣ್ಯತೆ ಇಲ್ಲದಾಗಿದೆ ಎಂದರು ನರೇಂದ್ರು ಹೇಳಿದರು.ಕೃಷಿ ವಿಶ್ವವಿದ್ಯಾಲಯ ಕೃಷಿಕರನ್ನು ರೂಪಿಸುತ್ತಿಲ್ಲ
ದೇಶದಲ್ಲಿ 200ರಷ್ಟು ಕೃಷಿ ಸಂಬಂಧ ವಿಶ್ವವಿದ್ಯಾನಿಲಯಗಳಿದ್ದು, ಅದರಿಂದ ಕೃಷಿ ತಜ್ಞರಷ್ಟೇ ಹುಟ್ಟುತ್ತಿದ್ದಾರೆ ಹೊರತು ಒಬ್ಬನೇ ಒಬ್ಬ ಕೃಷಿಕನಾಗಿ ರೂಪುಗೊಳ್ಳುವುದಿಲ್ಲ. ಇಂದು ಸಮುದಾಯವನ್ನು, ಮನಸ್ಥಿತಿಯನ್ನು ಹಾಗೂ ಆರೋಗ್ಯವನ್ನು ಜೋಡಿಸುವ ಕೃಷಿ ರಂಗದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಉತ್ತಮ ಪಲಿತಾಂಶ : ಅಭಿನಂದನೆ
ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶದ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಪ್ರಾಸ್ತವಿಕ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ಬೆಳಂದೂರು ಕಾಲೇಜಿನ ಕಲಾ ವಿಭಾಗ ಶೇ. 100 ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ಬಳಗವನ್ನು ಅಭಿನಂದಿಸುತ್ತಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳೇ ಕಾಲೇಜಿನ ರಾಯಭಾರಿಗಳಾಗಬೇಕೆಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯ ಶ್ರೀಧರ್ ರೈ ಮಾದೋಡಿ ಸಿ.ಪಿ. ಜಯರಾಮ ಗೌಡರೊಂದಿಗಿನ ತನ್ನ ಒಡನಾಟದ ಕುರಿತು ವಿವರಿಸಿದರು. ಪ್ರಿನ್ಸಿಪಾಲ್ ಪದ್ಮನಾಭ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಿಡಿಸಿ ಸದಸ್ಯರಾದ ಅರುವಗುತ್ತು ಚಂದ್ರಕಲಾ ಜಯರಾಮ, ಸೀತಾರಾಮ ಗೌಡ ಮುಂಡಾಳ, ಸಂಪತ್ ಕುಮಾರ್ ರೈ ಪಾತಾಜೆ, ನ್ಯಾಯವಾದಿ ಶೀನಪ್ಪ ಗೌಡ ಬೈತ್ತಡ್ಕ, ಶುಭಾ ಆರ್. ನೋಂಡಾ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸದಸ್ಯರಾದ ಶತ್ರುಂಜಯ ಆರಿಗ, ಹಾಜಿ ಅಬ್ದುಲ್ ರಹಿಮಾನ್, ಕಾಲೇಜಿಗೆ ಸಭಾಭವನ ಕೊಡುಗೆ ನೀಡಿರುವ ರತಿ ಮಂಜುನಾಥ ಶೆಟ್ಟಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮಾರ್ಕಾಜೆ, ಪಿ.ಡಿ. ಗಂಗಾಧರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಧ್ಯಾಪಕರಾದ ವೆಂಕಟೇಶ್ ಪ್ರಸನ್ನ ಸ್ವಾಗತಿಸಿ, ಸ್ವಾಮಿ ಎಸ್. ಕಾರ್ಯಕ್ರಮ ನಿರೂಪಿಸಿದರು. ಹನುಮಂತ ಗೌಡ ಹೆಚ್. ವಂದಿಸಿದರು.

error: Content is protected !!

Join the Group

Join WhatsApp Group