ನೂಜಿಬಾಳ್ತಿಲ: ಸ್ವಸಹಾಯ ಸಂಘಗಳ ಸದಸ್ಯರೊಂದಿಗಿನ ಪ್ರಧಾನಿ ಸಂವಾದ ಟಿ.ವಿ.ಯಲ್ಲಿ ವೀಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ,ಜೂ.13. ಪ್ರಧಾನಿ ನರೇಂದ್ರ ಮೋದಿಯವರು ಸ್ವಸಹಾಯ ಸಂಘ ಸದಸ್ಯರೊಂದಿಗೆ ಜು.12ರಂದು ಬೆಳಿಗ್ಗೆ 9ರಿಂದ 10 ಗಂಟೆಯ ತನಕ ನವದೆಹಲಿಯಲ್ಲಿ ಸಂವಾದ ಕಾರ್ಯಕ್ರಮ ನಡೆಸಿದ್ದು ಇದರ ನೇರಪ್ರಸಾರವನ್ನು ನೂಜಿಬಾಳ್ತಿಲದ ಸ್ತ್ರಿಶಕ್ತಿ ಸ್ವಸಹಾಯ ಸಂಘಗಳ ಸದಸ್ಯೆಯರು ಟಿ.ವಿ.ಮೂಲಕ ವೀಕ್ಷಣೆ ಮಾಡಿದರು.

ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ಇದು ಟಿ.ವಿ.ಯಲ್ಲಿ ನೇರಪ್ರಸಾರಗೊಂಡಿದ್ದು ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಆನಂದರವರ ನೇತೃತ್ವದಲ್ಲಿ ಕಲ್ಲುಗುಡ್ಡೆ ಮರಿಯಾಂಬಿಈಸುಫ್ ಸಾಹೇಬರ ಮನೆಯಲ್ಲಿ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯೆಯರು ಸಂವಾದ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಆನಂದರವರು, ಇಂತಹ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಅಭಿವೃದ್ದಿಗೆ ಪೂರಕವಾದ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸುತ್ತಮುತ್ತಲಿನ ಸುಮಾರು 26ಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು.

Also Read  ಒಣ ಗಾಂಜಾ ಸಂಗ್ರಹಿಸಿದ್ದ ವ್ಯಕ್ತಿ ಬಂಧನ

 

error: Content is protected !!
Scroll to Top