(ನ್ಯೂಸ್ ಕಡಬ)newskadaba.com ಕಡಬ,ಜೂ.13 ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಳೆದ ಸೋಮವಾರದಿಂದ ಆಗಾ ಮುಳುಗಡೆಯಾಗಿ ತೆರವಾಗುತ್ತಿತ್ತು. ಬುದವಾರ ಮದ್ಯಾಹ್ನ ಮುಳುಗಡೆಯಾದ ಬಳಿಕ ಗುರುವಾರ ಬೆಳಿಗ್ಗೆ ಅರ್ದ ಗಂಟೆಗಳ ಕಾಲ ತೆರವಾಗಿ ಬಳಿಕ ಮುಳುಗಡೆಯಾದ ಸೇತುವೆ ಶುಕ್ರವಾರವೂ ಮುಂದುವರಿದಿದೆ.

ಸೇತುವೆ ಮುಳುಗಡೆಯಿಂದಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದೆ. ಶಾಲಾ ಕಾಲೇಜು ವಿದ್ಯಾಥರ್ಿಗಳು ಕೂಲಿ ಕಾರ್ಮಿಕರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆ ಸಾಯಂಕಾಲ ಖಾಸಗಿ ವಾಹನಗಳಲ್ಲಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆಯ ಕಡಬ ಭಾಗದಿಂದ ಮತ್ತು ಉಪ್ಪಿನಂಗಡಿ ಭಾಗದಿಂದ ಖಾಸಗಿ ವಾಹನಗಳು ಸರ್ವಿಸ್ ನಡೆಸುತ್ತವೆ. ಕೆಲವೊಂದು ಸರಕಾರಿ ಬಸ್ಸುಗಳು ಆಗೊಮ್ಮೆ ಈಗೋಮ್ಮೆ ಸೇತುವೆಯ ಎರಡೂ ಬದಿಯಲ್ಲೂ ಸೇವೆ ನೀಡುತ್ತವೆ. ಇಕ್ಕೆಡೆಗಳಲ್ಲಿ ಸೇತುವೆ ತನಕ ಆಗಮಿಸಿ ವಾಪಸ್ಸಾಗುವ ಸರಕಾರಿ ಬಸ್ಸುಗಳಿಗೆ ನಿಗದಿತ ಸಮಯವಿಲ್ಲದ ಕಾರಣ ಹೆಚ್ಚಿನ ಪ್ರಯಾಣಿಕರು ಖಾಸಗಿ ವಾಹನವನ್ನು ಅವಲಂಬಿಸುವಂತಾಗಿದೆ. ಕಡಬದಿಂದ ಕೊಂಬಾರು, ಮರ್ದಾಳ, ಕಲ್ಲುಗುಡ್ಡೆ ಮೊದಲಾದ ಗ್ರಾಮೀಣ ಭಾಗಕ್ಕೆ ತೆರಳುವ ಬಸ್ಸುಗಳ ಸಮಯದಲ್ಲೂ ವ್ಯತ್ಯಾಸವಾಗಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
