ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕರಾಟೆ ತರಬೇತಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com,ಕಡಬ.ಜೂ.12. ಸ್ವರಕ್ಷಣೆಗೆ ಕರಾಟೆ ತರಬೇತಿ ಅಗತ್ಯ. ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರ ಮೇಲೆ ನಡೆಯುವ ನೀಚ ಕೃತ್ಯಗಳನ್ನು ಹಿಮ್ಮೆಟ್ಟಿಸಲು ವಿದ್ಯಾರ್ಥಿನಿಯರು ಅತೀ ಹೆಚ್ಚಾಗಿ ಕರಾಟೆ ಶಿಕ್ಷಣ ಪಡೆಯುವುದು ಉತ್ತಮ. ವಿದ್ಯಾ ಸಂಸ್ಥೆ ಕರಾಟೆ ಶಿಕ್ಷಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ನಿವೃತ್ತ ಶಿಕ್ಷಕ ಗುಮ್ಮಣ್ಣ ಗೌಡ ಹೇಳಿದರು.

ಅವರು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಕರಾಟೆ ತರಬೇತಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ಸತೀಶ್ ಭಟ್ , ಕರಾಟೆ ತರಬೇತಿದಾರರಾದ ಪ್ರದೀಪ್ , ಉಮೇಶ್ ಉಪಸ್ಥಿತರಿದ್ದರು .ಶಾಲಾ ಮುಖ್ಯಗುರು ಸತೀಶ್ ಭಟ್ ಪ್ರಾಸ್ತಾವಿಸಿದರು. ವಿದ್ಯಾರ್ಥಿನಿಯಾದ ಭಾರತಿ ಸ್ವಾಗತಿಸಿದರು. ಸಿಂಚನಾ ವಂದಿಸಿದರು. ಶ್ರೇಯಾ ಪ್ರಾರ್ಥಿಸಿದರು. ಮಯೂರಿ ಕಾರ್ಯಕ್ರಮ ನಿರೂಪಿಸಿದರು.

Also Read  ಕುಂಡಾಜೆ: ಕೋಮು ಘರ್ಷಣೆ ಪ್ರಕರಣ ► ಮೂವರ ಆರೋಪಿಗಳ ಬಂಧನ

 

error: Content is protected !!
Scroll to Top