ಕೊಯಿಲ: ಕ್ಷೀರಸಾಗರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸುಧೀಶ್ ಪಟ್ಟೆ

(ನ್ಯೂಸ್ ಕಡಬ) newskadaba.com,ಕೊಯಿಲ.ಜೂ.12. ಗ್ರಾಮದ ಸಂಕೇಶ ಎಂಬಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕ್ಷೀರಸಾಗರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕೊಲ ಗಾ.ಪಂ.ಸದಸ್ಯ ಸುಧೀಶ್ ಪಟ್ಟೆ ಆಯ್ಕೆ ಯಾಗಿದ್ದಾರೆ.

ಇತ್ತೀಚೆಗೆ ಸಂಕೇಶದಲ್ಲಿ ನಡೆದ ರೈತರ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ನಿರ್ದೇಶಕರಾಗಿ ಪ್ರವೀಣ್ ಕುಮಾರ್ ನೀಡೆಳು, ರಾಧಕೃಷ್ಣ ಶೆಟ್ಟಿ ಕಲ್ಕಾಡಿ, ಉಮೇಶ್ ಗೌಡ ಸಂಕೇಶ, ರಮೇಶ್ ಕೋರಿಕಾರು, ಅಬ್ದುಲ್ ಖಾದರ್ ಕುದುಲೂರು, ಹರೀಶ್ಚಂದ್ರ ಕಲ್ಕಾಡಿ, ಮಂಜುಳ ಸಂಕೇಶ, ಲೀಲಾವತಿ ಯಾದವ ಖಂಡಿಗ, ಕೃಷ್ಣಪ್ಪ ಪೂಜಾರಿ ಬುಲ್ಗೋಡಿ, ಸುಂದರ ಕೆ ಪಟ್ಟೆ, ಕಾರ್ಯದರ್ಶಿಯಾಗಿ ತಿಮ್ಮಪ್ಪ ಗೌಡ ಸಂಕೇಶ, ಜೊತೆ ಕಾರ್ಯದರ್ಶಿಯಾಗಿ ಗಂಗಾಧರ ಗೌಡ ಪರಂಗಾಜೆ ಆಯ್ಕೆಯಾಗಿದ್ದಾರೆ.

Also Read  ಲಾಕ್ ಡೌನ್ ಎಫೆಕ್ಟ್ ➤ 40 ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ನೀಡಿದ ಪ್ರಕಾಶ್ ಎನ್.ಕೆ.

 

error: Content is protected !!
Scroll to Top