ಕಡಬ: ಮಹಿಳೆಯ ಮನೆ ಭಾಗಶ: ಕುಸಿತ-ಅಪಾರ ನಷ್ಟ

(ನ್ಯೂಸ್ ಕಡಬ) news ಕಡಬ.ಜೂ.12.ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಹಳೆಸ್ಟೇಶನ್ ಬಳಿಯ ದಿ.ಪಿಜಿನರವರ ಪತ್ನಿ ಚೋಮು (65ವ.) ಎಂಬವರ ಹಳೆಯ ಮನೆ ಜು.9ರಂದು ಅಪರಾಹ್ನ ಭಾಗಶ: ಕುಸಿದು ಬಿದ್ದಿದೆ. ಘಟನೆ ವೇಳೆ ಚೋಮುರವರು ಸೊಪ್ಪು ತರಲು ಹೋಗಿರುವುದರಿಂದ ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಕಲ್ಲುಗುಡ್ಡೆ ಜಿ.ಪಂ.ರಸ್ತೆಗೆ ತಿರುಗುವ ಹಳೆಸ್ಟೇಷನ್ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ಚೋಮುರವರು ಇಲ್ಲಿ ವಾಸ್ತವ್ಯವಿದ್ದಾರೆ. ತನ್ನ ತಂದೆಯ ಕಾಲದಿಂದಲೇ ಇಲ್ಲಿ ಮನೆ ಕಟ್ಟಿ ಇವರು ವಾಸಿಸುತ್ತಿದ್ದರು. ಮಣ್ಣಿನ ಗೋಡೆಯ ಈ ಮನೆಯಲ್ಲಿ ಚೋಮುರವರು ಮಾತ್ರ ವಾಸಿಸುತ್ತಿದ್ದು ಮಳೆಯಿಂದಾಗಿ ಜು.9ರಂದು ಮಧ್ಯಾಹ್ನದ ವೇಳೆ ಮನೆಯ ಒಂದು ಭಾಗ ಕುಸಿದುಬಿದ್ದಿದೆ. ಘಟನೆ ವೇಳೆ ಚೋಮುರವರು ಸೊಪ್ಪು ತರಲು ಹೋಗಿದ್ದು ಅಪಾಯದಿಂದ ಪಾರಾಗಿದ್ದಾರೆ.

Also Read  ಕೋಳಿ ಅಂಕಕ್ಕೆ ಪೊಲೀಸರ‌ ದಾಳಿ ➤ 9 ಮಂದಿ ವಶಕ್ಕೆ

ಘಟನೆಯಿಂದ ಸುಮಾರು 85,000 ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಕಡಬ ಗ್ರಾ.ಪಂ.ಸದಸ್ಯೆ ಶಾಲಿನಿ ಸತೀಶ್ ನಾಕ್ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗ್ರಾ.ಪಂ.ನಿಂದ ಆಗುವ ಸಹಕಾರ ಮಾಡುವುದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಕಂದಾಯ ಸಿಬ್ಬಂದಿಗೂ ಮನೆಯ ದುರಸ್ಥಿಗೆ ಪ್ರಾಕೃತಿಕ ವಿಕೋಪದಲ್ಲಿ ಹೆಚ್ಚಿನ ಧನಸಹಾಯ ನೀಡುವಂತೆ ತಿಳಿಸಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ತಿಳುವಳಿಕೆ ಕೊರೆತೆಯಿಂದ ಈ ಸ್ಥಳದ ದಾಖಲೆಗಳನ್ನು ಇನ್ನೂ ಸರಿಮಾಡಿಕೊಂಡಿಲ್ಲ. ತಂದೆ ಪೆರ್ನರವರ ಹೆಸರಿನಲ್ಲಿಯೇ ಇದೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ನಾನೇನು ಮಾಡಲಿ ಎಂದು ಚೋಮುರವರು ಅಳಲು ತೋಡಿಕೊಂಡಿದ್ದಾರೆ.

error: Content is protected !!
Scroll to Top