ದಕ್ಷಿಣ ಕನ್ನಡ:ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ

 (ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ,ಜೂ.11. ಭಾರತ್ ವಿಕಾಸ್ ಪರಿಷದ್,ದಕ್ಷಿಣ ಕನ್ನಡ , ಮಂಗಳಾ ಶಾಖೆ ಯ ಉದ್ಘಾಟನಾ ಮತ್ತು ಪದಗ್ರಹಣ ಸಮಾರಂಭವು ದಿ: 06 , ಜುಲೈ 2018 ರಂದು ನಗರದ ಓಷನ್ ಪರ್ಲ್ ಹೋಟೆಲ್ ನ ಸಭಾಂಗಣ ದಲ್ಲಿ ಭಾರತ್ ವಿಕಾಸ್ ಪರಿಷದ್ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯಾದ ಶ್ರೀ ಸುರೇಶ ಜೈನ ರವರು ನೆರವೇರಿಸಿದರು.ಮಂಗಳಾ ಶಾಖೆ ಯ ನೂತನ ಅಧ್ಯಕ್ಷ ರಾಗಿ ಡಾ. ಸಚ್ಚಿದಾನಂದ ರೈ ರವರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ಯಾಗಿ ನಿತಿನ್ ಶೆಟ್ಟಿ ಅಗರಿ , ಖಜಾಂಚಿಯಾಗಿ ಮಾಧವ ಎಂ ಎಸ್ ಹಾಗೂ ಸಹ ಕಾರ್ಯದಶಿಯಾಗಿ ಡಾ. ಅನಂತ ಪ್ರಭು ರವರು ಪ್ರಮಾಣವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಡಾ. ಸತೀಶ್ ರಾವ್ , ಮಂಗಳೂರು ಮಹಾನಗರ ಸಂಘಚಾಲಕ್ (RSS), ಹಾಗೂ ಭಾ. ವಿ. ಪ. ನ ಕರ್ನಾಟಕದ ಪ್ರಾಂತ ಕಾರ್ಯದರ್ಶಿ ಡಾ. ದೇವತಾ ಶ್ರೀನಿವಾಸ್, ಶ್ರೀ ಭಾರ್ಗವ ಎಂ. ಆರ್. ಪ್ರಾಂತ ಕಾರ್ಯದರ್ಶಿ ( ಸಂಸ್ಕಾರ) , ಶ್ರೀ ಐ, ಮೋಹನ್ , ಪ್ರಾಂತ ಕಾರ್ಯದರ್ಶಿ (ಸೇವಾ) ರವರು ಉಪಸ್ಥಿತರಿದ್ದರು.ಭಾ. ವಿ. ಪ. ನ ಹತ್ತು ಹಲವು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ನೂತನ ಅಧ್ಯಕ್ಷ ರಾದ ಡಾ. ಸಚ್ಚಿದಾನಂದ ರೈ ರವರು ತಿಳಿಸಿದರು.ಈ ಪದಗ್ರಹಣ ಸಮಾರಂಭದಲ್ಲಿ ಸುಮಾರು 50 ಜನರು ಭಾ. ವಿ. ಪ. ನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮ ವು ವಂದೇಮಾತರಂ ಗಾಯನಕ್ದೊಂದಿಗೆ ಪ್ರಾರಂಭವಾಯಿತು.ನಿರೂಪಣೆಯು ಪ್ರೀತಿ ಶೇಣಿೈ ರವರು ನೆರವಿರಿಸಿದರು, ನೂತನ ಕಾರ್ಯದರ್ಶಿಯಾದ ನಿತಿನ್ ಶೆಟ್ಟಿ ಅಗರಿ ರವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.

Also Read  ಕೆಟ್ಟ ದೃಷ್ಟಿದೋಷ ಗಳಿಂದ ರಕ್ಷಣೆ ಮತ್ತು ದಿನ ಭವಿಷ್ಯ

error: Content is protected !!
Scroll to Top