ಪ್ರತಿಯೊಬ್ಬರಲ್ಲಿ ಪರಿಸರ ಪ್ರಜ್ಞೆ ಅಗತ್ಯ – ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com,ಸುರತ್ಕಲ್.ಜೂ.11. ಇಂದು ಬೆಳಿಗ್ಗೆ 08.00 ಗಂಟೆಗೆ ಸುರತ್ಕಲ್ ಘಟಕದ ಕಛೇರಿಯಲ್ಲಿ ವನಮಹೋತ್ಸವ ಮತ್ತು ಪ್ರವಾಹ ರಕ್ಷಣಾ ನಿರತ ಗೃಹರಕ್ಷಕರಿಗೆ ರೈನ್ಕೋಟ್ ಹಾಗೂ ಬೂಟ್ ಹಸ್ತಾಂತರ ಕಾರ್ಯಕ್ರಮವನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ನೆಟ್ಟು, ಬೆಳೆಸಿದರೆ ಅದೇ ಪ್ರಕೃತಿಗೆ ನಮ್ಮ ಸಣ್ಣ ಕೊಡುಗೆ ಎಂದು ನುಡಿದರು. ಗೃಹರಕ್ಷಕರು ನಿಷ್ಕಾಮ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಪರಿಸರ ಪ್ರಜ್ಞೆಯನ್ನು ಜಾಗೃತಿಗೊಳಿಸುವ ‘ವನಮಹೋತ್ಸವ’ ಕಾರ್ಯಕ್ರಮ ನಡೆಸುವುದು ಶ್ಲಾಘನೀಯ ಎಂದರು.

Also Read  ಬೆಳ್ಳಾರೆ: ಐತಿಹಾಸಿಕ ಬಂಗ್ಲೆಗುಡ್ಡೆಯಲ್ಲಿ ಬುಶ್ರಾ ವಿದ್ಯಾಸಂಸ್ಥೆ ಕಾವು ಹಾಗೂ ಸ್ನೇಹಿತರ ಕಲಾ ಸಂಘದ ವತಿಯಿಂದ ಅಮರಕ್ರಾಂತಿಯ ನೆನಪು ಕಾರ್ಯಕ್ರಮ

ನಿರಂತರವಾಗಿ ಮೂರನೇ ವರ್ಷ ವನಮಹೋತ್ಸವ ಆಚರಿಸಿದ ಸುರತ್ಕಲ್ ಘಟಕದ ಅಧಿಕಾರಿ ಮತ್ತು ಗೃಹರಕ್ಷಕರನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರು ಶ್ಲಾಘೀಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಚಂದ್ರವತಿ ಭಟ್, ಶಿಕ್ಷಕಿ, ಮಧ್ಯ ಅಂಗನವಾಡಿ ಕೇಂದ್ರ, ಶ್ರೀಮತಿ ಗೀತಾ, ಸಹಾಯಕಿ, ಅಂಗನವಾಡಿ, ಶ್ರೀ ಬಾಬು ದೇವಾಡಿಗ, ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನ, ಮಧ್ಯ, ಇದರ ಸಹಾಯಕರು ಮತ್ತು ಸುರತ್ಕಲ್ ಘಟಕದ ಘಟಕಾಧಿಕಾರಿಯವರಾದ ಶ್ರೀ ರಮೇಶ್ ಮತ್ತು ಸುರತ್ಕಲ್ ಘಟಕದ ಗೃಹರಕ್ಷಕ ಗೃಹರಕ್ಷಕಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Also Read  ಜೂ. 11ರಿಂದ ಜಿಲ್ಲೆಯಾದ್ಯಂತ ಚರ್ಮ ಗಂಟು ವಿರುಧ್ಧ ಉಚಿತ ಲಸಿಕಾ ಅಭಿಯಾನ

 

error: Content is protected !!
Scroll to Top