ನೂಜಿಬಾಳ್ತಿಲ: ಅಪಾಯದ ಅಂಚಿನಲ್ಲಿರುವ ಮರ, ಇನ್ನೂ ಎಚ್ಚೆತ್ತುಕೊಳ್ಳದ ಇಲಾಖೆ

(ನ್ಯೂಸ್ ಕಡಬ) newskadaba.com ಕಡಬ ಜು.11. ಗ್ರಾ.ಪಂ.ನ ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿ ಗರ್ಗಾಸ್ಪಾಲ್ ಎಂಬಲ್ಲಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರದಿಂದ ಸಾರ್ವಜನಿಕರು ಪ್ರಯಾಣಿಕರು ಆತಂಕಗೊಂಡು ಭಯದಿಂದಲೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಧರ್ಮಸ್ಥಳ ಸುಬ್ರಹ್ಮಣ್ಯ ಕ್ಷೇತ್ರವನ್ನು ಸಂಪರ್ಕಿಸುವ ಈ ರಾಜ್ಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ದಿನನಿತ್ಯ ಈ ರಸ್ತೆಯಲ್ಲಿ ಹಾದು ಹೋಗುತ್ತಿದ್ದು ಜೀವ ಭಯದಿಂದಲೇ ಪ್ರಯಾಣಿಸುತ್ತಿದ್ದಾರೆ. ಕಳೆದ ಅದೆಷ್ಟೋ ವರ್ಷಗಳಿಂದ ಅರಣ್ಯ ಇಲಾಖೆಗೆ, ಪಿಡಬ್ಲ್ಯುಡಿ ಇಲಾಖೆಗೆ ಮನವಿ ಮಾಡಿಕೊಂಡರೂ ಗ್ರಾಮ ಸಭೆಗಳಲ್ಲಿ ಸಾರ್ವಜನಿಕರು ನಿರಂತರ ಆಗ್ರಹ ಪಡಿಸಿದರೂ ಪರಿಣಾಮ ಶೂನ್ಯವಾಗಿದೆ. ಮರವು ಒಣಗಿದ್ದು ಈಗಾಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ.
ಈ ಮರದ ಬುಡದಲ್ಲಿ ಹೆದ್ದಾರಿಯ ರಸ್ತೆಯು ತಿರುವು ಹೊಂದಿದ್ದು ರಸ್ತೆ ಪರಿಚಯವಿಲ್ಲದ ವಾಹನ ಸವಾರರಿಗೆ ಇದೂ ಇನ್ನಷ್ಟೂ ಅಪಾಯವಿದೆ.

Also Read  ಬಸ್ ಢಿಕ್ಕಿ- ರಸ್ತೆ ದಾಟಲು ನಿಂತಿದ್ದ ವ್ಯಕ್ತಿ ಮೃತ್ಯು

ಕಳೆದ 1 ತಿಂಗಳ ಹಿಂದೆ ಕಡಬಕ್ಕೆ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತರಿಗೆ ಸಾರ್ವಜನಿಕರು ಮರ ತೆಗೆಯುವಂತೆ ತೋಡಿಕೊಂಡಿದ್ದರು. ಈ ಬಗ್ಗೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ ಎ.ಸಿ ಯವರು ತಕ್ಷಣ ಅಪಾಯದ ಮರ ತೆಗೆಯುವುದರೊಂದಿಗೆ ತೆಗೆದ ಮರಕ್ಕೆ ಪ್ರತಿಯಾಗಿ ಗಿಡಗಳನ್ನು ರಸ್ತೆ ಮಾರ್ಜಿನ್ ಬಿಟ್ಟು ಬೆಳೆಸಬೇಕೆಂದು ಸೂಚಿಸಿದ್ದಾರೆ. ಆದರೆ ಎಸಿಯವರ ಸೂಚನೆಗೂ, ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಊರಿನ ಸಾರ್ವಜನಿಕರ ಬೇಡಿಕೆಗೂ ಸ್ಪಂದಿಸದೇ ಇರುವ ಅಧಿಕಾರಿಗಳು ಇನ್ನೂ ಮರ ತೆರವಿಗೆ ಮುಂದಾಗದಿರುವುದು ವಿಪರ್ಯಸವಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ತಕ್ಷಣ ಮರ ತೆರವಿಗೆ ಮುಂದಾಗದಿದ್ದಲ್ಲಿ ಹೋರಾಟ ಮಾಡಲಾಗುವುದು ಎನ್ನುವ ಎಚ್ಚರಿಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

Also Read  ಯುವ ಕವಯಿತ್ರಿ ರಶ್ಮಿ ಸನಿಲ್ ಅವರಿಗೆ ಹ್ಯಾಟ್ರಿಕ್ ರಾಜ್ಯ ಪ್ರಶಸ್ತಿ

 

error: Content is protected !!
Scroll to Top