ಶ್ರೀ ರಾಮಕುಂಜೇಶ್ವರ ಎನ್ನೆಸೆಸ್ಸ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com ,ಕಡಬ.ಜೂ.11. ಮನುಷ್ಯ ತನ್ನ ಜೀವಿತವಾಧಿಯಲ್ಲಿ ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸದರೆ ಬದುಕು ಸಾರ್ಥಕವಾಗುತ್ತದೆ ಎಂದು ಕಡಬ ಸರಸ್ವತೀ ವಿದ್ಯಾಲಯ ಸಂಚಾಲಕ ವೆಂಕಟ್ರಮಣ ಮಂಕುಡೆ ಹೇಳಿದರು.
ಅವರು ಶ್ರೀ ರಾಮಕುಂಜೇಶ್ವರ ಪದವಿ ಪುರ್ವ ಕಾಲೇಜಿನ ಎನ್ನೆಸೆಸ್ಸ್ ಘಟಕದ ಪ್ರಸಕ್ತ ಸಾಲಿನ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ನಿಸ್ವಾರ್ಥ ಸೇವಾ ಮನೊಭಾವನೆ ಬೆಳೆಯಲು ಎನ್ನೆಸೆಸ್ಸ್ ಪೂರಕವಾಗಿದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎನ್ನೆಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಶಿಸ್ತುಬದ್ದ ಅನುಸಾಸನ ಜೀವನದಿಂದ ನಮ್ಮ ವ್ಯಕ್ತಿತ್ವ ಬೆಳಗುತ್ತದೆ. ಸ್ವಪ್ರಜ್ಞೆ, ಪರಪ್ರಜ್ಞೆ ಹಾಗೂ ರಾಷ್ಟ್ರಪ್ರಜ್ಞೆಗಳನ್ನು ಬೆಳೆಸಿಕೊಳ್ಳಿ ಎಂದರು.
ಎನ್ನೆಸೆಸ್ ಕಾರ್ಯಕ್ರಮಾಧಿಕಾರಿ ಗಣರಾಜ ಕುಂಬ್ಲೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸತೀಶ್ ಕುಮಾರ್ ಸ್ವಾಗತಿಸಿ ವಂದಿಸಿದರು.

Also Read  ಪುತ್ತೂರು :ಬೃಹತ್ ಕಾಂಪೌಂಡ್ ಗೋಡೆ ಕುಸಿತ➤ ಜಿಲ್ಲೆಯ ಅತೀ ದೊಡ್ಡ ಗೋಶಾಲೆಗೆ ಹಾನಿ…!!!

 

 

error: Content is protected !!
Scroll to Top