ಪ್ರಾಯೋಜನಾ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com,ಜು.06. ನಿರಂತರವಾಗಿ ಕನ್ನಡ ಪರ, ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸುವ ಸಂಘ-ಸಂಸ್ಥೆಗಳಿಗೆ ಅವರು ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕೆ ಕಲಾ ತಂಡಗಳನ್ನು ಪ್ರಾಯೋಜಿಸಲು ಅವಕಾಶವಿರುತ್ತದೆ. ಈ ಸಲುವಾಗಿ ಜಿಲ್ಲಾ ಮಟ್ಟದ ಕಲಾ ತಂಡಗಳ ಆಯ್ಕೆಗೆ ಅರ್ಜಿ ಅಹ್ವಾನಿಸಿದೆ.
ಜಿಲ್ಲಾ ಮಟ್ಟದಲ್ಲಿ ಕಲಾ ತಂಡಗಳನ್ನು ಪ್ರಾಯೋಜನೆ ಮಾಡುವಾಗ ಪಾರದರ್ಶಕತೆ ಹಾಗೂ ಕಲಾತಂಡಗಳಿಗೆ ಸಮಾನ ಅವಕಾಶ ನೀಡಲು (ಸಾಮಾನ್ಯ, ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ) ಸುಗಮ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಗೀತೆ, ಹಿಂದುಸ್ಥಾನಿ ಸಂಗೀತ, ಹಿಂದುಸ್ಥಾನಿ ವಾದ್ಯ ಸಂಗೀತ, ಕರ್ನಾಟಕ ವಾದ್ಯ ಸಂಗೀತ ಶಾಸ್ತ್ರೀಯ ನೃತ್ಯ, ನೃತ್ಯ ರೂಪಕ, ಸಮೂಹ ನೃತ್ಯ, ಯಕ್ಷಗಾನ ತಾಳಮದ್ದಳೆ, ಹರಿಕಥೆ, ಗಮಕವಾಚನ, ರಂಗ ಗೀತೆಗಳು, ಯಕ್ಷಗಾನ ಪ್ರದರ್ಶನ, ನಾಟಕ ಪ್ರದರ್ಶನ, ಪೌರಾಣಿಕ ನಾಟಕ, ಗಮಕ, ಕಥಾ ಕೀರ್ತನೆ, ದಾಸರ ಪದಗಳು, ಗೊಂಬೆಯಾಟ ಹಾಗೂ ವಿವಿಧ ಜನಪದ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಆಕರ್ಷಕ ವೇಷಭೂಷಣಗಳೊಂದಿಗೆ ಮೆರವಣಿಗೆ ಹಾಗೂ ವೇದಿಕೆ ಕಲಾತಂಡಗಳು ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರಿಂದ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 14.

Also Read  ಬೆಳ್ಮ ಗ್ರಾಮ ಸಭೆ

ಅರ್ಜಿ ಸಲ್ಲಿಸಿದ ನಂತರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ ಆಯ್ಕೆ ಸಮಿತಿಯು ಸಂದರ್ಶನದ ಮೂಲಕ ಕಲಾ ತಂಡಗಳ ಅರ್ಹತೆ, ಪರಿಣಿತಿ ಹಾಗೂ ವೇಷ ಭೂಷಣದ ಆಧಾರದ ಮೇಲೆ ಕಲಾತಂಡಗಳನ್ನು ಆಯ್ಕೆ ಮಾಡುವುದು. ಆಯ್ಕೆಯಾದ ಕಲಾತಂಡಗಳ ಪಟ್ಟಿ ಪ್ರಕಟಿಸಿ, ಕೇಂದ್ರ ಕಚೇರಿಯ ನಿರ್ದೇಶನದಂತೆ ಕಲಾತಂಡಗಳಿಗೆ ಕಾರ್ಯಕ್ರಮ ಪ್ರಾಯೋಜಿಸಲಾಗುವುದು.
ಅರ್ಜಿ ಸಲ್ಲಿಸದೇ ಇರುವ ಹಾಗೂ ಸಂದರ್ಶನಕ್ಕೆ ಹಾಜರಾಗದೇ ಇರುವ ಕಲಾವಿದರು ಕಲಾತಂಡಗಳಿಗೆ ಇನ್ನು ಮುಂದೆ ಯಾವುದೇ ತರಹದ ಕಾರ್ಯಕ್ರಮ ನೀಡಲು ಅವಕಾಶವಿರುವುದಿಲ್ಲ.
ಅರ್ಜಿ ನಮೂನೆಗಾಗಿ ಮತ್ತು ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ದೂ: 0824-2451527 ಸಂಪರ್ಕಿಸಬಹುದಾಗಿದೆ ಎಂದು ಇಲಾಖಾ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ - ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

 

error: Content is protected !!
Scroll to Top