ಅಡ್ಯನಡ್ಕ: ‘ಸಾಹಿತ್ಯ ಕಮ್ಮಟ- 2018’

(ನ್ಯೂಸ್ ಕಡಬ) newskadaba.com ಅಡ್ಯನಡ್ಕ,ಜು.05. ಇಲ್ಲಿನ ಜನತಾ ಪ್ರೌಢಶಾಲೆಯ ಸಾಹಿತ್ಯ ಸಂಘದ ವತಿಯಿಂದ ಒಂದು ದಿನದ ಸಾಹಿತ್ಯ ಕಮ್ಮಟ ಜು. 4ರಂದು ಶಾಲೆಯ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಜರುಗಿತು. ಸೃಜನಶೀಲ ಸಾಹಿತ್ಯ ಬರವಣಿಗೆಗೆ ಸಂಬಂಧಿಸಿ ಹಿರಿಯ ಸಾಹಿತಿ ವಿ. ಮ. ಭಟ್ ಅಡ್ಯನಡ್ಕ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ವಿಪುಲವಾದ ಪದಸಂಪತ್ತು, ಛಂದಸ್ಸಿನ ಜ್ಞಾನ, ಪ್ರತಿಭಾ ಸಂಪನ್ನತೆಯಿಂದ ಒಂದು ಉತ್ತಮ ಕಾವ್ಯ ಸೃಷ್ಟಿಯಾಗುತ್ತದೆ. ರಸವತ್ತಾದ ಶೈಲಿ ಜನಮಾನಸವನ್ನು ಸೆಳೆದು ಆಪ್ತವಾಗಿ ಬೇರೂರುತ್ತದೆ. ಸಮೃದ್ಧವಾದ ಮೌಲ್ಯಗಳು ಮತ್ತು ಆಶಯಗಳಿಂದ ಓದುಗನಿಗೆ ಸಾಹಿತ್ಯ ನೀಡಬಲ್ಲ ಕೊಡುಗೆ ಅಸದೃಶವಾದುದು ಎಂದು ಅವರು ಹೇಳಿದರು.

Also Read  ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿ.ಸಿ ರೋಡಿನಲ್ಲಿ ಎಬಿವಿಪಿಯಿಂದ ಪ್ರತಿಭಟನೆ

ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಸಂಘದ ಅಧ್ಯಕ್ಷೆ ಪಂಚಮಿಕುಮಾರಿ ವಂದಿಸಿದರು. ಸಾಹಿತ್ಯ ಸಂಘದ ಉಪಾಧ್ಯಕ್ಷ ಪ್ರಸಾದ್ ಕುಮಾರ್ ವೇದಿಕೆಯಲ್ಲಿದ್ದರು. ಮುಫೀದ ಎನ್. ಕಾರ್ಯಕ್ರಮ ನಿರೂಪಿಸಿದರು.

 

error: Content is protected !!
Scroll to Top