ಜಿಲ್ಲಾ ಖಜಾನೆಯಲ್ಲಿ ನಿವೃತ್ತಿ: ಸನ್ಮಾನ

(ನ್ಯೂಸ್ ಕಡಬ) newskabada.com ಮ0ಗಳೂರು,ಜುಲೈ.04. ಜಿಲ್ಲಾ ಖಜಾನೆ ಮಂಗಳೂರಿನಲ್ಲಿ ಸತತ 33 ವರ್ಷ ಸೇವೆಸಲ್ಲಿಸಿ ನಿವೃತ್ತರಾದ ಯಶವಂತ ನಾಯಕ್ ಅವರನ್ನು ಜಿಲ್ಲಾ ಖಜಾನಾಧಿಕಾರಿ ಮಾಧವ ಹೆಗ್ಡೆಯವರು ನೆರೆದಿರುವವರ ಸಮ್ಮುಖದಲ್ಲಿ ಜೂನ್ 30 ರಂದು ಸನ್ಮಾನಿಸಿದರು. ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಹೃದಯನಾಥ ಮತ್ತು ನಿವೃತ್ತ ಖಜಾನಾಧಿಕಾರಿ ಶೋಭರಾಣಿ, ಸಹಾಯಕ ಖಜಾನಾಧಿಕಾರಿ ಅನಿತಾ ಕಸ್ತೂರಿ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉಪ ಖಜಾನಾಧಿಕಾರಿ ಗುರುರಾಜ ಭಟ್ ವಿಟ್ಲ ಇವರು ಪ್ರಾಸ್ತಾವಿಕ ಮಾತನಾಡಿದರು.

ಪ್ರಭಾಕರ ಅಡಪ್ಪ, ಪ್ರಭಾಕರ ಜಾಧವ್ ಇವರು ನಿವೃತ್ತರ ಗುಣಗಾನ ಮಾಡಿದರು. ಮೊಹಮ್ಮದ್ ಇಕ್ಬಾಲ್ ಕಾರ್ಯಕ್ರಮ ಸಂಯೋಜಿಸಿ, ಶಾರದಾ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಎಲ್ಲಾ ಖಜಾನೆ ಉಪ ಖಜಾನೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇಲಾಖೆ ಸಿಬ್ಬಂದಿಗಳು ಹಾಜರಿದ್ದು ನಿವೃತ್ತರನ್ನು ಗೌರವಿಸಿದರು. ರೀಟಾ ಸ್ವಾಗತಿಸಿದರು ಮತ್ತು ಸಂಧ್ಯಾ ಧನ್ಯವಾದ ಅರ್ಪಿಸಿದರು.

Also Read  ನ. 13 ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರ

 

 

 

(ಚಿತ್ರ ಇದೆ)

error: Content is protected !!
Scroll to Top