ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ವನ ಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ,ಜು.03. ಇಂದು ಸುರಕ್ಷಾ ದಂತ ಚಿಕಿತ್ಸಾಲಯ ರಿಫಾ ಸೆಂಟರ್ ಹೊಸಂಗಡಿ ಇದರ 22ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಉಚಿತ ಸಸಿ ವಿತರಣಾ ಕಾರ್ಯಕ್ರಮ ಜರುಗಿತು. 1997ನೇ ಜುಲೈ ತಿಂಗಳ 3ರಂದು ಮಾನ್ಯ ಶ್ರಿ ಬಿ. ರಮಾನಾಥ ರೈ ಅವರಿಂದ ಹೊಸಂಗಡಿಯ ಹಿಲ್ಸೈಡ್ ಕಾಂಪ್ಲೆಕ್ಸ್ನಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಉದ್ಘಾಟಿಸಲ್ಪಟ್ಟಿತ್ತು. ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ಮೋಹನ್ ಇದರ ಸಾರಥ್ಯದಲ್ಲಿ ಆರಂಭಗೊಂಡ ಸುರಕ್ಷಾ ದಂತ ಚಿಕಿತ್ಸಾಲಯವಾಗಿ ಅಭಿವೃದ್ಧಿಗೊಂಡು ಇದೀಗ ಯಶ್ವಸಿ 21 ಸಂವತ್ಸರಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿದೆ. 22ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ) ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಇದರ ವತಿಯಿಂದ ಇಂದು ಉಚಿತ ಸಸಿ ವಿತರಣ ಕಾರ್ಯಕ್ರಮ ಜರುಗಿತು. ಈ ದಿನದಂದು ದಂತ ಚಿಕಿತ್ಸಾಲಯಕ್ಕೆ ಬಂದ ಎಲ್ಲಾ ರೋಗಿಗಳಿಗೆ ಒಂದೊಂದು ಗಿಡಗಳನ್ನು ನೀಡಿ ವಿಶಿಷ್ಟ ರೀತಿಯಲ್ಲಿ ವನ ಮಹೋತ್ಸವ ಆಚರಿಸಿ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮುಡಿಸಲಾಯಿತು. ಕಳೆದ ವರ್ಷವೂ ಇದೇ ದಿನದಂದು ಮಾವು, ಹಲಸು, ನೇರಳೆ, ಪೇರಳೆ, ಬಾದಾಮಿ ಮುಂತಾದ ಗಿಡಗಳನ್ನು ವಿತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Also Read  ಕಡಬ: ವರದಕ್ಷಿಣೆ ಕಿರುಕುಳ- ಹಲ್ಲೆ ➤ ಪ್ರಕರಣ ದಾಖಲು

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹರ್ಷಾದ್ ವರ್ಕಾಡಿ ಅವರು ಮಾತನಾಡುತ್ತಾ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವ ಮತ್ತು ರೋಗದ ಬಗ್ಗೆ ಕೆಲಸ ಹೆಚ್ಚು ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಡಾ|| ಮುರಲೀ ಮತ್ತು ಡಾ|| ರಾಜಶ್ರೀ ಇವರ ಪರಿಸರ ಪ್ರಜ್ಞೆ, ಪರಿಸರ ಕಾಳಜಿ ಮತ್ತು ಸೇವಾ ಮನೋಭಾವವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಹೊಸಂಗಡಿಯ ಪರಿಸರದ ಜನರ ಹಲ್ಲಿನ ಆರೋಗ್ಯವನ್ನೂ ಕಾಪಾಡುವಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಇದರ ಪಾತ್ರ ಮಹತ್ವರವಾಗಿದ್ದು ಮುಂದೆಯು ಅವರ ಸೇವೆ ನಿರಂತರವಾಗಿ ಸಿಗಲಿ ಎಂದು ಹಾರೈಸಿದರು. ಜಿಲ್ಲಾ ಪಂಚಾಯತ್ ಕಾಸರಗೋಡು ಇದರ ಸದಸ್ಯರಾದ ಶ್ರೀಮತಿ ಮುಮ್ತಾಜ್ ಸವಿೂರಾ ಇವರು ಸುಕುಮಾರ ಶಾಂತಿ ನಗರ ಇವರಿಗೆ ಸಸಿ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವಿಲ್ಮಾ ಡಿ ಆಲೈಡಾ ಇವರು ಅನಿತಾ ಅವರಿಗೆ ಗಿಡ ನೀಡಿ ಶುಭ ಹಾರೈಸಿದರು. ಹೆಲ್ತ್ ಮಲಬಾರ್ ಇದರ ಡೈರೆಕ್ಟರ್ ಆದ ಶ್ರೀ ಹವಿೂದ್ ಬೋರ್ಕಳ ಇವರು ಉಪಸ್ಥಿತರಿದ್ದರು. ಸುರಕ್ಷಾ ದಂತ ಚಿಕಿತ್ಸಾಲಯದ ವೈದ್ಯೆ ಡಾ|| ನೇಹಾ ಶರ್ಮ, ಸಿಬ್ಬಂದಿಗಳಾದ ರಮ್ಯ, ಪ್ರಿಯಾ, ಕಾವ್ಯ, ಯಶಸ್ವಿನಿ ಮುಂತಾದವರು ಉಪಸ್ಥಿತರಿದ್ದರು.ಹಾಗೂ ಇಂದು ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಉಚಿತವಾಗಿ ಸಸಿ ವಿತರಿಸಲಾಯಿತು. ಸುಮಾರು ನೂರು ಗಿಡಗಳನ್ನು ವಿತರಿಸಲಾಯಿತು. ಕಳೆದ ಮೂರು ವರ್ಷಗಳಿಂದ ಸುರಾಕ್ಷಾ ದಂತ ಚಿಕಿತ್ಸಾಲಯ ಈ ರೀತಿ ನಿರಂತರವಾಗಿ ವನ ಮಹೋತ್ಸವ ಮತ್ತು ಸಸಿ ವಿತರಣೆ ಮಾಡುತ್ತಿದ್ದು ಜನರಲ್ಲಿ ಉತ್ತಮ ಗಾಳಿ, ಬೆಳಕು ಮತ್ತು ಪರಿಸರ ಆರೋಗ್ಯಕ್ಕೆ ಅಗತ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತದೆ.

Also Read  ಆರೋಗ್ಯ & ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಸರ್ಕಾರಿ ಕೆಲಸ - ಆಸಕ್ತರಿಂದ ಅರ್ಜಿ ಆಹ್ವಾನ

 

 

 

error: Content is protected !!
Scroll to Top