(ನ್ಯೂಸ್ ಕಡಬ) newskadaba.com ಆಲಂಕಾರು,ಜು.03. ಕುಂತೂರು ಗ್ರಾಮದ ಬಾಚಡ್ಕ ಅಲಂಗಪ್ಪೆ ಪ್ರದೇಶಗಳ ಅಡಿಕೆ ತೋಟಕ್ಕೆ ಸೋಮವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿಯನ್ನು ಹಾನಿ ಮಾಡಿದೆ.
ಬಲ್ಯ ಗ್ರಾಮದ ಬನಾರಿ ಕಾಡಿನಿಂದ ಹೊರ ಬಂದಿರುವ ಎರಡು ಆನೆಗಳು ಅಲಂಗಪ್ಪೆ ಬಾಚಡ್ಕ ನಿವಾಸಿಗಳಾದ ಕುಶಾಲಪ್ಪ ಗೌಡ, ಜಾನಕಿ, ಹಾಗೂ ಸುರೇಶ್ ರವರ ತೋಟಕ್ಕೆ ದಾಳಿ ಮಾಡಿ ಅಪಾರ ಪ್ರಮಾಣದ ಬಾಳೆಗಿಡವನ್ನು ನಾಶ ಪಡಿಸಿದೆ. ಜೊತೆಗೆ ಅಡಿಕೆ ಮರ, ತೆಂಗಿನ ಮರಕ್ಕೂ ಹಾನಿ ಮಾಡಿದ್ದು, ಜಾನಕಿ ಎಂಬವರ ಪಂಪ್ ಶೆಡ್ನ್ನು ಹಾನಿಗೊಳಿಸಿದೆ. ತೋಟದಲ್ಲಿದ್ದ ಪೈಪ್ ಲೈಗಳನ್ನು, ಸ್ಪಿಂಕ್ಲರ್ಗಳನ್ನು ಪುಡಿ ಮಾಡಿದ್ದು ಭಾರಿ ನಷ್ಟ ಉಂಟು ಮಾಡಿದೆ.
ಪೆರಿಯಶಾಂತಿಯಲ್ಲಿ ಕೆಲ ದಿನಗಳ ಹಿಂದೆ ಕಾಣ ಸಿಕ್ಕಿದ್ದ ಆನೆಗಳೇ ಇದಾಗಿರಬಹುದೆಂದು ಅಂದಾಜಿಸಲಾಗಿದೆ. ಸುಮಾರು ಆರು ಗಂಟೆಗೆ ಕಾಡಿನಿಂದ ಹೊರ ಬಂದಿರುವ ಎರಡು ಆನೆಗಳು ತೋಟದ ಪಕ್ಕದಲ್ಲಿರುವ ಈಚಲ ಗಿಡವನ್ನು ಮುರಿದು ತಿನ್ನುತ್ತಿದ್ದವು. ಬಳಿಕ ರಾತ್ರಿ ವೇಳೆ ತೋಟಕ್ಕೆ ದಾಳಿ ಮಾಡಿದ್ದು ಮುಂಚಾನೆ ನಾಲ್ಕು ಗಂಟೆಯವರೆಗೆ ತೋಟದಲ್ಲೇ ಠಿಕಾಣಿ ಹೂಡಿದ್ದವು ಎಂದು ತೋಟದ ಮಾಲಿಕರು ತಿಳಿಸಿದ್ದಾರೆ.
ರಾತ್ರಿಯೇ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪಂಜ ಅರಣ್ಯಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗಟ್ಟುವ ಕಾರ್ಯವನ್ನು ಮಾಡಲಾಯಿತು. ಈ ಸಂಧರ್ಭದಲ್ಲಿ ಪಂಜ್ಯುಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ರವೀಂದ್ರ, ರವಿಪ್ರಕಾಶ್, ಅರಣ್ಯ ರಕ್ಷಕರಾದ ರವಿಚಂದ್ರ, ಸಂತೋಷ್, ಸುಬ್ರಹ್ಮಣ್ಯ ಮೊದಲಾದವರು ಬೆಳಗ್ಗಿನವರೆಗೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಆನೆಗಳು ತೋಟದಿಂದ ಹೊರ ಹೋಗಿದ್ದರೂ ಕುಂತೂರು ವ್ಯಾಪ್ತಿಯ ಬನಾರಿ ಕಾಡಿನಲ್ಲಿ ಠಿಕಾಣಿ ಹೂಡಿರುವ ಸಾಧ್ಯತೆಯಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.