ಮ0ಗಳೂರು: ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮ0ಗಳೂರು ಜುಲೈ .03.ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ನಿರಂತರ ಪ್ರಯತ್ನದ ಫಲವಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗಾಗಿ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಸದ್ರಿ ಕೋರ್ಸ್ ಕೆಲಸದಲ್ಲಿರುವವರಿಗೆ ಅನುಕೂಲವಾಗಲು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ, ಮಂಗಳೂರು ಇಲ್ಲಿ ಸಂಧ್ಯಾ ಕೋರ್ಸ್ ಗಾಗಿ ಕಾರ್ಯನಿರ್ವಹಿಸಲ್ಪಡುತ್ತದೆ. ಇದರ ಪ್ರಯೋಜನವನ್ನು ತುಳು ಆಸಕ್ತರು ಪಡೆಯಬಹುದು.
ಸದ್ರಿ ಕೋರ್ಸ್ ಎಂ.ಎ ಕನ್ನಡ ಸೇರಿದಂತೆ ಇತರೇ ಸಮಾಜ ವಿಜ್ಞಾನ ಕೋರ್ಸ್ ಗಳಿಗೆ ಸಮನಾಗಿದ್ದು, ಉದ್ಯೋಗಕಾಂಕ್ಷಿಗಳಿಗೆ ಈ ಕೋರ್ಸ್ ಗಳಿನಿಂದ ಪ್ರಯೋಜನವಾಗಲಿದೆ.
ಈಗಾಗಲೇ ತುಳು ಬಾಷೆ ಕಲಿಸಲು ಪದವಿ ಹೊಂದಿದ ಅಧ್ಯಾಪಕರ ಕೊರತೆಯಿದ್ದು, ಸದ್ರಿ ಕೋರ್ಸನ್ನು ಅಭ್ಯಸಿಸಿದಲ್ಲಿ ಮುಂದಕ್ಕೆ ಅವರಿಗೆ ಉಜ್ಜಲ ಭವಿಷ್ಯವಿದೆ. ಈ ಕೋರ್ಸ್ ನಲ್ಲಿ ತುಳು ಭಾಷೆಯ ಪ್ರಾಚೀನತೆ, ತುಳು ಸಂಸ್ಕೃತಿ, ತುಳುವರ ಆರಾಧನೆಗಳು ತುಳು ಲಿಪಿ ತುಳುವರ ಕೃಷಿ ಪದ್ಧತಿ, ವ್ಯಾಪಾರ ಸೇರಿದಂತೆ ತುಳುವರ ಉದ್ಯಮಶೀಲತೆಯ ವಿಷಯಗಳು ಒಳಗೊಂಡಿದ್ದು, ತುಳುವರು, ತುಳುವ ಸಮಾಜವನ್ನು ಸಂಕ್ಷೀಪ್ತವಾಗಿ ತಿಳಿದುಕೊಳ್ಳಲು ಈ ಕೋರ್ಸ್ ನಲ್ಲಿ ಅವಕಾಶವಿರುತ್ತದೆ.

Also Read  ಕಾರು ಢಿಕ್ಕಿ: ಐದರ ಬಾಲಕ ಮೃತ್ಯು

ಆಸಕ್ತರು ಈ ಪ್ರಯೋಜನವನ್ನು ಪಡೆದುಕೊಂಡು ವಿಶ್ವವಿದ್ಯಾನಿಲಯ ಆರಂಭಿಸುವ ಈ ಕೋರ್ಸ್ ಗಳಿಗಾಗಿ ಪ್ರವೇಶಾತಿ ಪಡೆದು ತುಳು ಬಾಷೆ, ಸಂಸ್ಕೃತಿಯ ಸಮಗ್ರ ಮಾಹಿತಿಗಳನ್ನು ಪಡೆದುಕೊಳ್ಳಬೇಕಾಗಿ ತಿಳಿಸಲಾಗಿದೆ. ಈ ಕೋರ್ಸ್ ಗೆ ಸೇರಲು ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಪದವೀದರರು ಆರ್ಹರಾಗಿದ್ದು, ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ಅಭ್ಯಾಸ ಮಾಡಿಕೊಂಡು ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು.
ಅಸಕ್ತರು ಅರ್ಜಿ ಹಾಗೂ ಮಾಹಿತಿ ಪುಸ್ತಕಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ, ಮಂಗಳಗಂಗೋತ್ರಿ, ಕೋಣಾಜೆ ಅಥವಾ ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ ಇಲ್ಲಿಂದ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಜುಲೈ 16 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್ಸೈಟ್ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Also Read  ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

 

 

 

error: Content is protected !!
Scroll to Top