ಮಂಗಳೂರು: ತೆಂಗು ಫಸಲು ಟೆಂಡರ್/ಹರಾಜು

(ನ್ಯೂಸ್ ಕಡಬ)newskadba.com ಮ0ಗಳೂರು,ಜುಲೈ.03. ದಕ್ಷಿಣಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿನ ದಿನಾಂಕ 01-04-2018 ರಿಂದ 31-03-2019ರ ಅವಧಿಯ ತೆಂಗು ಫಸಲನ್ನು ಟೆಂಡರ್/ಹರಾಜು ಮೂಲಕ ವಿಲೆ ಮಾಡಲಾಗುವುದು.
ಜುಲೈ 25 ರಂದು ಬೆಳಿಗ್ಗೆ 11 ಗಂಟೆಗೆ ಕಛೇರಿ ನರ್ಸರಿ ಬಂಟ್ವಾಳ, ಅಪರಾಹ್ನ 4 ಗಂಟೆಗೆ ವಿಟ್ಲ ತೋಟಗಾರಿಕೆ ಕ್ಷೇತ್ರ, ಜುಲೈ 26 ರಂದು ಬೆಳಿಗ್ಗೆ 11 ಗಂಟೆಗೆ ಕಛೇರಿ ನರ್ಸರಿ, ಬೆಳ್ತಂಗಡಿ, ಅಪರಾಹ್ನ 3.30 ಗಂಟೆಗೆ ಚಾರ್ಮಾಡಿ ತೋಟಗಾರಿಕೆ ಕ್ಷೇತ್ರ, ಜುಲೈ 27 ರಂದು ಬೆಳಿಗ್ಗೆ 11 ಗಂಟೆಗೆ ಕಬಕ ತೋಟಗಾರಿಕೆ ಕ್ಷೇತ್ರ, ಮಧ್ಯಾಹ್ನ 3.30 ಗಂಟೆಗೆ ಕಛೇರಿ ನರ್ಸರಿ, ಸುಳ್ಯ, ಅಪರಾಹ್ನ 4.30 ಗಂಟೆಗೆ ಹೊಸಗದ್ದೆ ತೋಟಗಾರಿಕೆ ಕ್ಷೇತ್ರ, ಸುಳ್ಯ, ಜುಲೈ 28 ರಂದು ಬೆಳಿಗ್ಗೆ 11 ಗಂಟೆಗೆ ಪಡೀಲ್ ತೋಟಗಾರಿಕೆ ಕ್ಷೇತ್ರ, ಮಂಗಳೂರು, ಅಪರಾಹ್ನ 3.30 ಗಂಟೆಗೆ ಜಿಲ್ಲಾ ಸಸ್ಯಗಾರ, ಮಂಗಳೂರು.

ಆಸಕ್ತರು ವಿಲೇವಾರಿ ಷರತ್ತುಗಳು ಹಾಗೂ ವಿವರಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಅಧಿಕಾರಿ ಕಛೇರಿ ಅಥವಾ ಕ್ಷೇತ್ರಗಳಿಂದ ಪಡೆದು ಹರಾಜಿನಲ್ಲ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0824-2444298, 08255-234102(ಬಂಟ್ವಾಳ), 08257-232020(ಸುಳ್ಯ), 08256-232148(ಬೆಳ್ತಂಗಡಿ) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಧಾರಾವಾಹಿ ಪ್ರೀಯರಿಗೆ ಗುಡ್ ನ್ಯೂಸ್ ➤ಇಂದಿನಿಂದ ಸೀರಿಯಲ್ ಶೂಟಿಂಗ್ ಪ್ರಾರಂಭ.

 

 

error: Content is protected !!
Scroll to Top