ಕಡಬ: ಮಹಿಳಾ ಶರೀಯತ್ ಕಾಲೇಜು ಆರಂಭ

(ನ್ಯೂಸ್ ಕಡಬ) newskadaba.com ಕಡಬ,ಜು.03. ಇಲ್ಲಿಯ ರಹ್ಮಾನಿಯಾ ಟೌನ್ ಜುಮ್ಮಾ ಮಸೀದಿ ಅಧೀನದಲ್ಲಿ ಶಂಶುಲ್ ಉಲಮಾ ಮೆಮೋರಿಯಲ್ ದಾರುರ್ಹ್ಮಾ ಮಹಿಳಾ ಶರೀಯತ್ ಕಾಲೇಜು ಜು.1ರಂದು ಪ್ರಾರಂಭಗೊಂಡಿತು.
ಕಾಲೇಜನ್ನು ದುಃವಾ ಪ್ರಾರ್ಥನೆ ನೆರವೇರಿಸಿದ ಗಂಡಿಬಾಗಿಲು ಮುದರ್ರಿಸ್ ಅಸಯ್ಯದ್ ಅನಸ್ ಹಾದಿ ತಂಗಳ್ ಶರೀಯತ್ ಪಠ್ಯವನ್ನು ಅಲ್ಲಾಹುವಿನ ಹೆಸರಿನೊಂದಿಗೆ ವಿದ್ಯಾರ್ಥಿನಿಯರಿಗೆ ಹೇಳಿಕೊಡುವ ಮೂಲಕ ಚಾಲನೆ ನೀಡಿ ಮಾತನಾಡಿ ಪ್ರಸ್ತುತ ಯುವ ಜನಾಂಗ ಕೆಟ್ಟ ಹಾದಿಯಲ್ಲಿ ಸಾಗುತಿದ್ದು, ಅವರ ಜೀವನಕ್ಕೆ ಸೂಕ್ತವಾದ ಇಸ್ಲಾಮಿಕ್ ಶರೀಯತ್ ಶಿಕ್ಷಣ ಅತೀ ಅಗತ್ಯವಾಗಿದೆ. ಈಗಾಗಲೇ ವಿವಿಧ ಜಮಾಅತ್ಗಳ ಆಡಳಿತ ಮಂಡಳಿ ಸಮಿತಿ ಬಾರವಾಹಿಗಳ ಇಸ್ಲಾಂ ದೀನಿನ ಶರೀಯತ್ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ಯುವಕ ಯುವತಿಯರು ದುಶ್ಚಟಗಳಿಂದ ದೂರವಾಗಿ ದೀನಿ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಶ್ರಮಿಸುತ್ತಿದ್ದು, ಇಂದು ಕಡಬದಲ್ಲಿ ಶರೀಯತ್ ಕಾಲೇಜು ಪ್ರಾರಂಬಿಸುವುದರೊಂದಿಗೆ ಈ ಭಾಗದ ಎಲ್ಲಾ ಮುಸ್ಲಿಂ ಸಮುದಾಯ ಶರೀಯತ್ ವಿದ್ಯಾಭ್ಯಾಸದೊಂದಿಗೆ ಇಹಪರಗಳಲ್ಲಿ ವಿಜಯಿಗಳಾಗಲೆಂದು ದುಃವಾ ಆಶೀರ್ವಾಚನ ನೀಡಿದರು. ಕಲ್ಲೇಗ ಮುದರ್ರಿಸ್ ಅಬೂಬಕ್ಕರ್ ಸಿದ್ದಿಕ್ ಜಲಾಲಿ ಮುಖ್ಯಭಾಷಣಗೈದು ನಮ್ಮ ಮುಸ್ಲಿಂ ಹಿರಿಯ ವಿದ್ಯಾರ್ಥಿನಿಗಳಿಗೆ ಶರೀಯತ್ ಶಿಕ್ಷಣ ಅತೀ ಅಗತ್ಯವಿದ್ದು ಹಲವಾರು ಜಮಾಅತನ್ನು ಕೇಂದ್ರೀಕರಿಸಕೊಂಡು ಮಹೀಳಾ ಶರೀಯತ್ ಕಾಲೇಜು ಪ್ರಾರಂಭಿಸಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವ ಮೂಲಕ ಶರೀಯತ್ ಶಿಕ್ಷಣ ಕಲಿಯಬೇಕೆಂದರು.

*ಇಂದಿನ ಯುವ ಜನಾಂಗ ಪಠ್ಯದ ಕೇವಲ ಮುನ್ನುಡಿಯನ್ನು ಮಾತ್ರ ಕಲಿತು ಜೀವಿಸುತ್ತಿದ್ದಾರೆ. ಶರೀಯತ್ ಯಥಾಸ್ಥಿತಿಗೆ ಬರಲು ಪ್ರತಿಯೊಂದು ಪಾಠ್ಯದ ಆಳವಾದ ಸಂಶೋಧನೆಯ ಅಗತ್ಯವಿದ್ದು ಇದರ ಸಂಪೂರ್ಣ ಪ್ರತಿಫಲ ಪಡೆಯಲು ಶರೀಯತ್ ಕಾಲೇಜು ಅತೀ ಅಗತ್ಯವಿದೆ.
> ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಲ್ಲೇಗ.

Also Read  ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಅರ್ಜಿ ಆಹ್ವಾನ ಕಾಲಾವಧಿ ವಿಸ್ತರಣೆ ►ಪ್ರಸ್ತುತ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

*ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾದಾನ್ಯತೆ ಇದೆ. ಮಹಿಳೆ ತಾಯಿಯಾಗಿದ್ದು ನಮ್ಮನ್ನು ಸಾಕಿ ಸಲಹಿ ಸಮಾಜಕ್ಕೆ ಗುರುತಿಸಲಾಗಿದ್ದು. ತದನಂತರ ತಂದೆ ನಮ್ಮನ್ನು ಮುಖ್ಯವಾಹಿನಿಗೆ ತರುತ್ತಾರೆ ಎಂದರು.
ಮಹಿಳಾ ಸಮಾಜದ ಪ್ರಾಧ್ಯನ್ಯತೆ ಎಲ್ಲರೂ ತಿಳಿಯಬೇಕಾಗಿದ್ದು, ಮಹಿಳೆಯರು ಮೊದಲಾಗಿ ತಾನೂ ಸರಿಯಾಗಿ ಶರೀಯತ್ ಶಿಕ್ಷಣವನ್ನು ಪಡೆಯುವುದರೊಂದಿಗೆ, ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ಪಡೆಯಲೇ ಬೇಕಾಗಿದ್ದು ಇಂತಹ ಶರೀಯತ್ ಕಾಲೇಜ್ಗಳ ಮೂಲಕ ತಮ್ಮ ಶಿಕ್ಷಣವನ್ನು ವೃದ್ಧಿಸಿಕೊಂಡು ಇತರರಿಗೆ ಮಾರ್ಗದರ್ಶಕರಾಗಿ, ಜೀವಿಸಲು ದಾರಿದೀಪವಾಗುತ್ತದೆ.
ಪ್ರಸ್ತುತ ಕಾಲದಲ್ಲಿ ಹೆಣ್ಣು ಮಕ್ಕಳೇ ಅನೇಕ ರೀತಿಯ ಅಪಪ್ರಚಾರ ಅವಹೇಳನಕ್ಕೆ ಗುರಿಯಾಗುತ್ತಿದ್ದು ಅಂತಹ ಯಾವುದೇ ಅಪಪ್ರಚಾರಕ್ಕೆ ಎಡೆ ಮಾಡದೇ ನಾವು ನಮ್ಮ ಶರೀಯತ್ ಬಗ್ಗೆ ಶಿಕ್ಷಣ ಪಡೆಯುವುದರೊಂದಿಗೆ ಲೌಕಿಕ ವಿದ್ಯಾಭ್ಯಾಸವನ್ನೂ ಕೂಡ ಇಂತಹ ಕಾಲೇಜ್ ಮುಖಾಂತರ ಪಡೆದು ತನ್ನ ಸಂಸಾರ ಕುಟುಂಬವನ್ನು ಮುನ್ನಡೆಸಲು ಶ್ರಮಿಸಬೇಕು. ದೂರದ ವಿದ್ಯಾಥರ್ಿಗಳಿಗೆ ಬಸ್ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು ಎಲ್ಲಾ ವಿದ್ಯಾರ್ಥಿನಿಗಳು ಶರೀಯತ್ ಕಾಲೇಜ್ನಲ್ಲಿ ವಿದ್ಯಾಭ್ಯಾಸ ಪಡೆಯಬೇಕು, ಇದಕ್ಕೆ ವಿದ್ಯಾರ್ಥಿನಿಯರ ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳ ಶಿಕ್ಷಣಕ್ಕೆ ಸಹಕರಿಸಬೇಕು.
> ಕೆ.ಮುಹಮ್ಮದ್ ಮುಸ್ಲಿಯಾರ್ ಸಂಚಾಲಕರು, ಶರೀಯತ್ ಕಾಲೇಜ್ ಕಡಬ.

ಜಮಾಅತಿನ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆದುನಿಕ ಜೀವನದಲ್ಲಿ ಮಹಿಳೆಯರಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣದ ಅಗತ್ಯವಿದೆ. ಶಿಕ್ಷಣವನ್ನು ಪಡೆದ ಮಹಿಳೆಯರಿಗೆ ಇಸ್ಲಾಮಿಕ್ ಸಮಾಜದಲ್ಲಿ ಹೆಚ್ಚಿನ ಗೌರವವಿದ್ದು ತಾಯಿಯಾಗಿ ಎಲ್ಲರನ್ನೂ ಸಾಕಿಸಲಹುವ ಜವಾಬ್ದಾರಿ ಹೊತ್ತುಕೊಂಡಿದ್ದಾಳೆ. ಆದುದರಿಂದ ಆಡಳಿತ ಸಮಿತಿ ಶರೀಯತ್ ಕಾಲೇಜನ್ನು ಸ್ಥಾಪಿಸಲು ತೀರ್ಮಾನಿಸಿ ಅದಕ್ಕಾಗಿ ಶ್ರಮಸಿ ಈ ಸ್ಥಾಪನೆಯನ್ನು ಪ್ರಾರಂಭಿಸಲಾಗಿದೆ. ಆದರೆ ಈ ಶರೀಯತ್ ಕಾಲೇಜನ್ನು ನಡೆಸಲು ಪ್ರಾರಂಭಿಸಿದಂತೆ ಇನ್ನೊಂದು ಕಡೆಯಿಂದ ಇಲ್ಲಿಯ ಮಸೀದಿಯನ್ನು ನವೀಕರಣಗೊಳಿಸಿ ಹೊಸ ಮಸೀದಿಯನ್ನು ಕಟ್ಟಲು ಹಣಕಾಸಿನ ವ್ಯವಸ್ಥೆ ಮಾಡುವಲ್ಲಿ ಹೆಚ್ಚಿನ ಗಮನ ಹರಿಸಲಾಗಿದ್ದು ಈ ಶರೀಯತ್ ಕಾಲೇಜು ಪ್ರಾರಂಭಕ್ಕೆ ತಡವಾಗಿದ್ದರೂ ಇಂದು ಪ್ರಾರಂಭಿಸಿದ ಈ ಕಾಲೇಜನ್ನು ಮುಂದುವರಿಸಿಕೊಂಡು ಹೋಗಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದರು. ಮಸೀದಿಯ ಖತೀಬರು, ಕಾಲೇಜಿನ ಪ್ರಾಂಶುಪಾಲರಾದ ಅಲ್ಹಾಜ್ ಪಿಎಂ ಇಬ್ರಾಹಿಂ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಶರೀಯತ್ ಕಾಲೇಜಿನ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದರು.
ಸಂಶುಲ್ ಉಲಮಾ ಮೆಮೋರಿಯಲ್ ದಾರುರ್ರಹ್ಮಾ ಮಹಿಳಾ ಕಾಲೇಜಿನ ಸಂಚಾಲಕರಾದ ಮಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿ, ಜಮಾಅತಿನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಹಾಜಿ.ಕೆ.ಎಸ್.ಅಬ್ದುಲ್ ಹಮೀದ್ ವಂದಿಸಿದರು. ಸಹಸಂಚಾಲಕರಾದ ಹಾಜಿ ಕೆ.ಎಂ. ಹನೀಪು ಹಾಗೂ ಅಶ್ರಫ್ ಶೇಡಿಗುಂಡಿ ಕಾರ್ಯಕ್ರಮ ನಿರೂಪಿಸಿದರು.

Also Read  ಈ ಸಣ್ಣ ಕೆಲಸ ಮಾಡಿದರೆ ಗಂಡ ಹೆಂಡತಿ ಜಗಳ ಮತ್ತು ಶತ್ರುಗಳ ಕಾಟ ನಿವಾರಣೆ ಆಗುವುದು

 

 

 

error: Content is protected !!
Scroll to Top