(ನ್ಯೂಸ್ ಕಡಬ) newskadaba.com ಕಡಬ,ಜು.03. ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲಾ 2018-19ನೇ ಸಾಲಿನ ಮಂತ್ರಿಮಂಡಲವನ್ನು ಇತ್ತೀಚೆಗೆ ರಚಿಸಲಾಯಿತು. ಮುಖ್ಯಮಂತ್ರಿಯಾಗಿ 8ನೇ ತರಗತಿಯ ವಿಕಾಸ್, ಉಪಮುಖ್ಯಮಂತ್ರಿಯಾಗಿ 7ನೇ ತರಗತಿ ವಿನೀತ್ ಆಯ್ಕೆಯಾಗಿದ್ದಾರೆ. ವಿದ್ಯಾಮಂತ್ರಿಯಾಗಿ 8ನೇ ತರಗತಿಯ ದೀಕ್ಷಾ ಎಸ್, ಉಪವಿದ್ಯಾಮಂತ್ರಿಯಾಗಿ 7ನೇ ಯಶಸ್ಸ್, ಆರೋಗ್ಯ ಮಂತ್ರಿ 7ನೇ ಕೌಶಿಕ್, ಉಪ ಆರೋಗ್ಯಮಂತ್ರಿಯಾಗಿ 7ನೇ ಆಶಿಕ್, ಆಹಾರ ಮಂತ್ರಿಯಾಗಿ 8ನೇ ಚರಿಷ್ಮಾ, ಉಪ ಆಹಾರ ಮಂತ್ರಿಯಾಗಿ 7ನೇ ತರಗತಿಯ ವಂಶಿತಾ, ತೃಪ್ತಿ, ಪವಿತ್ರಾ, ಶುಚಿತ್ವ ಮಂತ್ರಿಯಾಗಿ 8ನೇ ರಾಧಿಕಾ, ಉಪ ಶುಚಿತ್ವ ಮಂತ್ರಿಯಾಗಿ 6ನೇ ವೆಂಕಟೇಶ್ ಆಯ್ಕೆಯಾಗಿದ್ದಾರೆ. ಸಭಾಪತಿಯಾಗಿ ದೀಕ್ಷಿತಾ 7ನೇ, ಉಪಸಭಾಪತಿಯಾಗಿ ಪ್ರಜ್ವಲ್ ಕೇಪುಂಜ, ವಾರ್ತಾ ಮಂತ್ರಿಯಾಗಿ 8ನೇ ಯಕ್ಷಿತ್, ಉಪವಾರ್ತಾಮಂತ್ರಿಯಾಗಿ ಕಾವ್ಯಾ 7ನೇ, ನೀರಾವರಿ ಮಂತ್ರಿಯಾಗಿ 7ನೇ ಸುಮಂತ್, ಉಪ ನೀರಾವರಿ ಮಂತ್ರಿಯಾಗಿ ಸುಧೀರ್ 7ನೇ, ಕೃಷಿ ಮಂತ್ರಿಯಾಗಿ ವರ್ಷಿತ್ 8ನೇ.
ಉಪಕೃಷಿ ಮಂತ್ರಿ 6ನೇ ವಿನುತ್, ಕ್ರೀಡಾಮಂತ್ರಿ 8ನೇ ಝುಬೇರ್, ಉಪಕ್ರೀಡಾ ಮಂತ್ರಿ 7ನೇ ಚೈತನ್ಯ, ಗ್ರಂಥಾಲಯ ಮಂತ್ರಿಯಾಗಿ ಸಿಂಚನಾ ಕೆ.ಎಸ್ 7ನೇ, ಉಪಗ್ರಂಥಾಲಯ ಮಂತ್ರಿಯಾಗಿ ಆಶಿತಾ 7ನೇ, ಸೌಮ್ಯ 7ನೇ, ಗೃಹ ಮಂತ್ರಿಯಾಗಿ 8ನೇ ತರಗತಿ ಪ್ರಿನ್ಸ್, ಉಪಗೃಹ ಮಂತ್ರಿಯಾಗಿ ಜಿತೇಶ್ 8ನೇ ಆಯ್ಕೆಯಾದರೆ ವಿರೋಧ ಪಕ್ಷದ ನಾಯಕನಾಗಿ 7ನೇ ತರಗತಿಯ ಶ್ರೇಯಸ್, ವಿರೋಧ ಪಕ್ಷದ ಉಪನಾಯಕನಾಗಿ 8ನೇ ತರಗತಿ ಮಾಧವ ಹಾಗೂ ವಿರೋಧ ಪಕ್ಷದ ಸದಸ್ಯರಾಗಿ ಸ್ವಾತಿ 8ನೇ, 7ನೇ ಅಮೃತ, 8ನೇ ಸತೀಶ್, 8ನೇ ಪ್ರಶಾಂತ್, 7ನೇ ಪ್ರಜ್ವಲ್ ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯಗುರುಗಳಾದ ಶ್ರೇಯಾಂಸ್ ನೇತೃತ್ವದಲ್ಲಿ ಪದವೀಧರೆ ಶಿಕ್ಷಕಿ ಶ್ರೀಲತಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಎಂ. ಚುನಾವಣೆ ನಡೆಸಿಕೊಟ್ಟರು. ಶಿಕ್ಷಕರಾದ ಶೈಲ ಟಿ., ಸಚಿದೇವಿ, ಶ್ವೇತಾ ಹಾಗೂ ಗೀತಾ ಸಹಕರಿಸಿದರು.