ಬೆಳ್ಳಾರೆ: ಅಕ್ರಮ ಗಾಂಜಾ ಮಾರಾಟ ಯತ್ನ ► ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.03. ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬೆಳ್ಳಾರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಬುಧವಾರದಂದು ನಡೆದಿದೆ.

ಬಂಧಿತ ಆರೋಪಿಗಳನ್ನು ಬೇಲೂರು ತಾಲೂಕಿನ ಹಳೇಬೀಡು ಬೂದಿಗುಂಡಿ ನಿವಾಸಿ ಅಕ್ಬರ್ ಎಂಬವರ ಪುತ್ರ ಸಾದಿಕ್(35), ಕರಿಕ್ಕಳದ ಐವತ್ತೊಕ್ಲು ಜನತಾ ಕಾಲೋನಿ ನಿವಾಸಿ ಶೇಕಬ್ಬ ಎಂಬವರ ಪುತ್ರ ಮಹಮ್ಮದ್ ಇಕ್ಬಾಲ್(25) ಮತ್ತು ಕಳಂಜ ಗ್ರಾಮದ ವಿಷ್ಣು ನಗರ ನಿವಾಸಿ ಮಹಮ್ಮದ್ ಎಂಬವರ ಪುತ್ರ ನೌಷಾದ್ ಎಂದು ಗುರುತಿಸಲಾಗಿದೆ. ಇವರು ಕಳಂಜ ಗ್ರಾಮದ ವಿಷ್ಣು ನಗರ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಗಾಂಜಾವನ್ನು ಮಾರಟ ಮಾಡಲು ಯತ್ನಿಸುತ್ತಿದ್ದಾಗ ಬೆಳ್ಳಾರೆ ಸಬ್ ಇನ್ಸ್‌ಪೆಕ್ಟರ್ ಈರಯ್ಯ ಡಿ.ಎನ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 950 ಗ್ರಾಂ ಗಾಂಜಾ ಹಾಗೂ ಅಕ್ರಮ ಮಾರಾಟದಿಂದ ಬಂದಿದ್ದ ಹಣ ಒಟ್ಟು 2600 ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.

Also Read  ಕಡಬ: ಎ.ಜೆ.ಎಸ್ ಮೊಬೈಲ್ & ಸರ್ವೀಸ್ ಸೆಂಟರ್ ಉದ್ಘಾಟನೆ ➤ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆ

error: Content is protected !!
Scroll to Top