(ನ್ಯೂಸ್ ಕಡಬ) newskadaba.com ಕುದ್ಮಾರು,ಜು.02. ಪುತ್ತೂರು ತಾಲೂಕು ಕುದ್ಮಾರು ಗ್ರಾಮದ ಬರೆಪ್ಪಾಡಿಯ ಸೆಲಿಂ, ಸಾಜಿದ್, ಸಾದಿಕ್ ಮೂವರು ಒಡಹುಟ್ಟಿದವರು. ಇವರ ಹುಟ್ಟಿದ ದಿನದಲ್ಲೊಂದು ವಿಶೆಷವಿದೆ. ಅದೇನೆಂದರೆ ಮೂವರದ್ದು ಹುಟ್ಟಿದ ದಿನ ಒಂದೇ. ಅದು ಜುಲೈ 01.
ಬಿ.ಎಂ. ಬಾವುಂಞ ಹಾಗೂ ರುಖಿಯಾ ದಂಪತಿಯ ಪುತ್ರರಾದ ಇವರು ಅನೇಕ ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದ್ದಾರೆ. ಎಸ್3 ಬ್ರದರ್ಸ್ ಎಂಬ ಹೆಸರನ್ನಿಟ್ಟುಕೊಂಡು ಪುತ್ತೂರಿನಲ್ಲಿ ಕ್ರೀಡಾಕೂಟ ಆಯೋಜಿಸಿದ್ದಾರೆ. ವಾಟ್ಸಪ್ ಗ್ರೂಪ್ ಮೂಲಕ ಬ್ಲಡ್ ಡೊನೇಟ್ ಕಾರ್ಯವನ್ನೂ ಮಾಡಿರುತ್ತಾರೆ. ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಇವರು ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲೂ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ. ಊರಿನ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಇವರು ಸ್ನೇಹಜೀವಿಗಳು. ಜಾತಿ ಧರ್ಮದ ಮೇರೆಯಿಲ್ಲದೇ ಆತ್ಮೀಯವಾಗಿ ಬೆರೆಯುವುದೂ ಇವರ ವಿಶೇಷತೆಗಳಲ್ಲೊಂದು. ಹೀಗಾಗಿ ಅಪಾರ ಸಂಖ್ಯೆಯ ಗೆಳೆಯರ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
*ಮೊದಲನೆಯವರು ಸೆಲಿಂ ಬರೆಪ್ಪಾಡಿ
ಇವರು ದುಬೈನಲ್ಲಿ ಉದ್ಯೋಗಿ. ವಿದ್ಯಾಭ್ಯಾಸ ಪೂರೈಸಿದ ಬಳಿಕ ಉದ್ಯೋಗವನ್ನು ಅರಸಿ ಇವರು ತೆರಳಿದ್ದು ದುಬೈಗೆ. ಕಳೆದ ಹತ್ತು ವರ್ಷಗಳಿಂದ ಅಲ್ಲಿಯೇ ದುಡಿಯುತ್ತಿರುವ ಇವರು ಚುಟುಕು, ಹಾಸ್ಯ ಕವಿತೆ ಬರೆಯುವುದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ. ದುಬೈ ಜೀವನದ ಕುರಿತಾದ ಇವರ ಲೇಖನವೊಂಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿ ವೈರಲ್ ಆಗಿತ್ತು.
*ಸಾಜಿದ್ ಬರೆಪ್ಪಾಡಿ
ಸೆಲಿಂನ ತಮ್ಮ ಸಾಜಿದ್ ಬೆಂಗಳೂರಿನಲ್ಲಿ ಅಕ್ವೇರಿಯಂ ಉದ್ಯಮ ನಡೆಸುತ್ತಿದ್ದಾರೆ. ಇವರು ಜಯ ಕನರ್ಾಟಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಹೆಬ್ಬಾಳ ವಿಧಾನ ಸಭಾ ಕ್ಷೇತ್ರ ಜಯಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ದುಡಿದಿರುತ್ತಾರೆ. ಪ್ರಸ್ತುತ ಆರ್ಟಿ ನಗರ ಬ್ಲಾಕ್ ಕಾಂಗ್ರೆಸ್ನ ಮೈನಾರಿಟಿ ಸಂಯೋಜಕರಾಗಿದ್ದಾರೆ.
*ಸಾದಿಕ್ ಬರೆಪ್ಪಾಡಿ
ಮಂಗಳೂರು ವಿವಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಗೈದ ಇವರು ರಾಜಕೀಯ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಸ್ನಾನಕೋತ್ತರ ಪದವಿ ಪಡೆದಿರುವ ಸಾದಿಕ್ ಪ್ರಸ್ತುತ ಕೆಪಿಸಿಸಿ ಸೋಶಿಯಲ್ ಮೀಡಿಯಾದ ಸದಸ್ಯರೂ ಹೌದು. ವಸತಿ ಸಚಿವ ಯು.ಟಿ. ಖಾದರ್ ಅವರ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ತಂಗಿ ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
ಬಾವುಂಞ ಕುಟುಂಬವೀಗ ಕೂರ್ನಡ್ಕದಲ್ಲಿ ನೆಲೆಸಿದೆ.