ಉಪ್ಪಿನಂಗಡಿ ಘಟಕದಲ್ಲಿ ವನಮಹೋತ್ಸವ

(ನ್ಯೂಸ್ ಕಡಬ) newskadaba ಉಪ್ಪಿನಂಗಡಿ,ಜು.02. ಉಪ್ಪಿನಂಗಡಿ ಘಟಕದಲ್ಲಿ ಜೂನ್ 28 ಗುರುವಾರ ರಂದು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಗಿಡ ನೆಡುವುದು, ಕಾಡು ಸಂರಕ್ಷಿಸುವುದು ಸೇವೆ ಕೊಡುಗೆಯ ಒಂದು ಭಾಗವಾಗಿದೆ. ಒಬ್ಬಾತ ವರ್ಷಕ್ಕೆ ಒಂದು ಗಿಡ ನೆಟ್ಟರೂ ಅದು ಬಹು ದೊಡ್ಡ ಕೊಡುಗೆ ಆಗಲಿದ್ದು, ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಪ್ರತಿವರ್ಷ ವನಮಹೋತ್ಸವ ಆಚರಿಸುತ್ತೇವೆ. ಆ ಬಳಿಕ ಆ ಗಿಡ ಏನಾಗಿದೆ ಎಂದು ನೋಡುವವರು ವಿರಳ, ನೆಟ್ಟ ಗಿಡಗಳನ್ನು ಪೋಷಣೆ ಮಾಡುವ ಮೂಲಕ ವನಮಹೋತ್ಸವವನ್ನು ಸಾರ್ಥಕಗೊಳಿಸಬೇಕಾಗಿದೆ ಎಂದು ಹೇಳಿದರು.

Also Read  ಕಡಬ: ಹಾವು ಕಡಿದು ಮಹಿಳೆ ಮೃತ್ಯು ► ರಬ್ಬರ್ ಶೀಟ್ ಒಣಗಿಸಲು ತೆರಳುತ್ತಿದ್ದಾಗ ಘಟನೆ

ಇದೀಗ ಜಿಲ್ಲೆಯ 14 ಯುನಿಟ್ ಪೈಕಿ ಉಪ್ಪಿನಂಗಡಿ ಘಟಕವು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದ್ದು, ಇಲ್ಲಿನ ಘಟಕದ ಬಗ್ಗೆ ಜಿಲ್ಲಾಧಿಕಾರಿಯವರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಸಮೂಹ ಶಿಕ್ಷಣ ಕೇಂದ್ರದ ಸಂಯೋಜಕ ಆಶ್ರಫ್ ಮಾತನಾಡಿ ಗೃಹರಕ್ಷಕ ದಳದ ಸಿಬ್ಬಂದಿಗಳು ಕನಿಷ್ಠ ಗೌರವಧನ ಪಡೆದು ಕೆಲಸ ಮಾಡುತ್ತಿದ್ದು, ಅಂಥದ್ದರಲ್ಲೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ತಾವುಗಳು ಸಮಾಜದ ನಿಜವಾದ ರಕ್ಷಕರು ಎಂದು ಹೇಳಿದರು. ಉಪ್ಪಿನಂಗಡಿ ಸರ್ಕಾರಿ ಮಾದರಿ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಮೊಹಿದೀನ್ ಕುಟ್ಟಿ, ಶಿಕ್ಷಕ ಸುರೇಶ್, ಅಂಗನವಾಡಿ ಶಿಕ್ಷಕಿ ಪುಷ್ಪಾವತಿ ಹಾಗೂ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು. ಉಪ್ಪಿನಂಗಡಿ ಘಟಕದ ಘಟಕಾಧಿಕಾರಿ ದಿನೇಶ್ ಸ್ವಾಗತಿಸಿದರು, ಗೃಹರಕ್ಷಕಿ ಸುಖಾತಾ ಶೆಟ್ಟಿ ವಂದಿಸಿದರು.

Also Read  ಕರಾವಳಿಯಲ್ಲಿ ಮುಂದಿನ ಎರಡು ದಿನಗಳಲ್ಲಿ ಮಳೆ ಸಾಧ್ಯತೆ

 

 

error: Content is protected !!
Scroll to Top