(ನ್ಯೂಸ್ ಕಡಬ) newskadaba.com ಕಬಕ, ಜು.02. ಇಲ್ಲಿನ ಕಬಕ ಪೇಟೆಯಿಂದ ಪೋಳ್ಯ ತಿರುವಿನ ವರೇಗೆ ರಸ್ತೆಯ ಬದಿಯ ಚರಂಡಿ ಗಳಿಗೆ ಅಸಮರ್ಪಕ ಮೋರಿ ಅಳವಡಿಸಿ ತಮ್ಮ ಖಾಸಾಗಿ ಗ್ಯಾರೇಜು, ಅಂಗಡಿ, ಮನೆಗಳಿಗೆ ರಸ್ತೆ ನಿರ್ಮಿಸಿಕೊಂಡಿದರಿಂದ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿಯುತಿದರಿಂದಾಗಿ ಮಾಣಿ – ಮೈಸೂರು ರಾಷ್ಟ ಹೆದ್ದಾರಿಯಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗುತಿತ್ತು. ಇದರಿಂದಾಗಿ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ರಸ್ತೆ ಹತ್ತಿರ ವಿರುವ ಕೃಷಿಕರಿಗೆ ತುಂಬಾ ತೊಂದರೆ ಉಂಟಾಗುತಿತ್ತು.
ಸಾರ್ವ ಜನಿಕ ದೂರಿನ ಹಿನ್ನೆಲೆಯಲ್ಲಿ ಕಬಕ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಸ್ಥಳೀಯ ಖಾಸಾಗಿ ಮೋರಿ ಅಳವಡಿಸಿದವರಿಗೆ ಸಮರ್ಪಕ ಅಳತೆಯ ಮೋರಿ ಅಳವಡಿಸುವಂತೆ ನೋಟಿಸು ಜಾರಿ ಗೊಳಿಸಿ ಅದಕ್ಕೂ ಸ್ಪಂದನೆ ನೀಡದ ಕಾರಣ. ಶನಿವಾರ ಜೆಸಿಬಿ ಯಂತ್ರದ ಮೂಲಕ ಪಂಚಾಯತ್ ವತಿಯಿಂದ ತೆರವು ಗೊಳಿಸಲಾಯಿತು. ಮುಂದೆ ಖಾಸಾಗಿಯವರ ಖರ್ಚಿನಲ್ಲಿಯೇ ಸಮರ್ಕ ನೀರು ಹರಿಯಲು ಬೇಕಾದ ವ್ಯಾಸ ವಿರುವ ಮೋರಿ ಗಳನ್ನು ತಂದು ಪಂಚಾಯತ್ ಅಧಿಕಾರಿಗಳ ಸಮ್ಮುಖದಲ್ಲಿ ಅಳವಡಿಸಿ ಚರಂಡಿ ಮುಚ್ಚಲು ಅವಕಾಶ ವಿದೆ ಎಂದು ಗ್ರಾ.ಪಂ.ಅಧ್ಯಕ್ಷೆ ಪ್ರೀತಾ ಬಿ, ಪತ್ರಿಕೆಗೆ ಮಾಹಿತಿ ನೀಡಿದರು.