ಒಡಕುಗಳನ್ನು ಸರಿಪಡಿಸಲು ರೋಟರಿ ಸಂಸ್ಥೆ ಶ್ರಮಿಸಬೇಕು –ನಿಟ್ಟೆ ವಿನಯ್ ಹೆಗ್ಡೆ

(ನ್ಯೂಸ್ ಕಡಬ) newskadaba.com ಕಡಬ,ಜು.02. ಸಮಾಜ ಸೇವೆಗಳು,ಜನಪ್ರತಿನಿಧಿಯ ಆಯ್ಕೆಗಳು ಸಮಾಜದ ಒಂದಾಗುವಿಕೆಗೆ ಕಾರಣ ಆಗಬೇಕು. ಬ್ರೀಟೀಷರು ಒಡೆದಾಳುವುದನ್ನೇ ಬಂಡವಾಳ ಮಾಡಿ ಆಳಿದರು,ಆಂಥದೇ ಶಿಕ್ಷಣನೂ ನೀಡಿದರು. ಎಂಬತ್ತು ವರುಷದ ನಾನು ಸ್ವಾತಂತ್ರ್ಯ ಸಮಯದ ದಿನಗಳನ್ನು ಆಶಯಗಳನ್ನು ಕಂಡ್ಡಿದ್ದೇನೆ. ಈಗೀಗ ಸಮಾಜದಲ್ಲಿ ಒಡಕು ಮೂಡಿಸಿ ವಿಜ್ರಂಭಿಸುವುದು ಕಂಡು ಮರುಗುತ್ತಿದ್ದೇನೆ. ರೋಟರಿ ಮತ್ತು ಇಂತಹ ಸೇವಾ ಸಂಸ್ಥೆಗಳು ಈ ಒಡಕು ಮೀರಿ ನಿಂತು ಸಮಾಜ ಒಂದು ಮಾಡಿ ಸೇವೆ ಮಾಡಬೇಕು, ಎಂದು ನಿಟ್ಟೆ ವಿನಯ್ ಹೆಗ್ಡೆ ನುಡಿದರು
ಅವರು ಕುಲಶೇಕರದ ಕೊರ್ಡೆಲ್ ಹಾಲ್ನಲ್ಲಿ ರೋಟರಿ 3181 ಜಿಲ್ಲೆ ಇದರ ನೂತನ ಗವರ್ನರ್ ರೋಟೇರಿಯನ್ ಎಂಪಿಎಚ್ ಎಫ್ ರೊಹಿನಾಥ್ ಪಿ ಪದಗ್ರಹಣದಲ್ಲಿ ಮುಕ್ಯ ಅತಿಥಿಯಾಗಿ ಭಾಗವಹಿಸಿ 250 ಅಂಗನವಾಡಿಗಳನ್ನು ದತ್ತು ಪಡೆವ ಮಾರ್ಗದರ್ಶಿ ಪತ್ರ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಆಂಗನವಾಡಿ ಶಾಲೆಗಳ ಸೌಕರ್ಯಗಳನ್ನು ಅಭಿವೃಧ್ದಿಪಡಿಸುವುದು ಸರಿಯಾದ ಕಾರ್ಯಕ್ರಮ ಎಂದ ಆವರು, ಎಳೆ ವಯಸ್ಸಿನಲ್ಲಿ ಸರಿಯಾದ ಕ್ರಮದಲ್ಲಿ ಶಿಕ್ಶಣದ ವಾತಾವರಣ ಮಾಡಿದರೆನೇ ಸ್ವಸ್ಥ ಸಮಾಜಕ್ಕೆ ಬುನಾದಿಯಾದೀತು.ಇದಕ್ಕೆಲ್ಲಾ ಕಟಿಬದ್ದರಾಗಿ ಶ್ರಮಿಸಲು ಮುಂದೆ ಬಂದರೆನೇ ಈ ಸಂಸ್ಥೆಗಳಿಗೆ ಅರ್ಥ. ಇಲ್ಲವಾದಲ್ಲಿ ಶ್ರೀಮಂತರ ಮೋಜಿನ ಕೂಟ ಎಂದು ಮಾತ್ರ ಪರಿಗಣಿಸಿ ಜನಸಾಮಾನ್ಯರ ಮನಗೆಲ್ಲುವಲ್ಲಿ ವಿಫಲವಾದೀತು ಎಂದರು.
ಪದ ಸ್ವೀಕಾರ ಮಾಡಿದ ನೂತನ ಗವರ್ನರ್ ರೊಟೇರಿಯನ್ ರೋಹಿನಾಥ್ ಮಾತನಾಡಿ ರೊಟೇರಿಯನರು ಶ್ರೀಮಂತ ಹೃದಯದವರು.ಪೊಲಿಯೋ ಇಡೀ ಲೊಕದ ನಕ್ಷೆಯಂದಲೇ ತೆಗೆದವರು. ಇಂದಿಗೆ ಭಾರತದಲ್ಲಿ ಒಂದೂ ಮಗು ಕಂಟುತ್ತಾ ನಡೆಯದೆ ಇರುವ ದೃಶ್ಯ ರೋಟರಿಯ ಕೊಟ್ಯಾಂತರ ಬಿಲಿಯನ್ ರುಪಾಯಿ ಖರ್ಚು ಮಾಡಿದ ಹೃದಯ ವ್ಯೆಶಲಯದ ರುಜುವಾತಗಿದೆ ಎಂದರು
ರೊಟೇರಿಯನ್ ಕೃಷ್ಣ ಶೆಟ್ಟೆ, ರೋಟೇರಿಯನ್ ದೇವ್ ದಾಸ್ ರೇಯ್ ಶುಭ ಹಾರೆಯಿಸಿದರು.
ಮೊದಲಿಗೆ ನಿರ್ಗಮನ ಗವರ್ನರ್ ಎಂ ಎಂ ಸುರೇಶ್ ಚಂಗಪ್ಪ ಮಾತನಾಡಿ ತನ್ನ ವರುಷದ ಸಾಧನೆಗಳನ್ನು ಬಣ್ನಿಸಿದರು
ಜಿಲ್ಲಾ ಆಡಳಿತ ಕಾರ್ಯದರ್ಶಿ ವಿಕ್ರಮ್ ದತ್ತ ಸ್ವಾತಿಸಿ ಕಾರ್ಯಕ್ರಮ ಕಾರ್ಯದರ್ಶಿ ವಿನಾಯಕ ಪ್ರಭು ವಂದಿಸಿದರು. ಆಲ್ವಿವನ್ ಡೆಸಾ ನಿರೂಪಿಸಿದರು ಉಪ ಗವರ್ನರ್ ಒಂಬತ್ತು ಮಂದಿ ಮತ್ತು ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಹಾಲಿ ಮತ್ತು ನಿಕಟಪೂರ್ವ ಗವರ್ನರ್ ಪತ್ನಿಯರು ವೇದಿಕೆಯಲ್ಲಿದ್ದರು .
ದ.ಕ. ಮಡಿಕೇರಿ,ಚಾಮರಾಜನಗರ,ಮೆಯ್ಸೂರ್ ಜಿಲ್ಲೆಗಳ ಎರಡು ಸಾವಿರ ಜನರು ಹಾಜರಿದ್ದರು.

Also Read  ಬಂಟ್ವಾಳ: ಎಸ್ ಐಗಳು, ಸಿಬ್ಬಂದಿ ಮೇಲೆಯೇ ಕಾರು ಹಾಯಿಸಿದ ಪ್ರಕರಣ ➤ ಇಬ್ಬರಿಗೆ ಜೈಲು ಶಿಕ್ಷೆ ಪ್ರಕಟ

 

 

 

error: Content is protected !!
Scroll to Top