ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಕಾರು ಚಾಲಕ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜು.01. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಕಾರು ಚಾಲಕ, ಪೆರಾಬೆ ಗ್ರಾಮದ ಅಗತ್ತಾಡಿ ನಿವಾಸಿ ಚಿದಾನಂದ ಪೂಜಾರಿ (45) ಹೃದಯಾಘಾತದಿಂದ ಆದಿತ್ಯವಾರ ಸಂಜೆ ನಿಧನರಾದರು.

ಮೃತರು ಸಂಜೆ ಮನೆಯಲ್ಲಿ ಕುಳಿತುಕೊಂಡು ಮನೆಯವರೊಂದಿಗೆ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದರು. ತಕ್ಷಣ ಆಲಂಕಾರಿನ 108 ರಲ್ಲಿ ಆಸ್ಪತ್ರೆಗೆ ಸಾಗಿಸಿದರೂ ಆಲಂಕಾರಿಗೆ ತಲುಪುವಾಗ ಕೊನೆಯುಸಿರೆಳೆದರು. ಇವರು ಕಳೆದ ಹತ್ತು ವರ್ಷಗಳಿಂದ ಶಕುಂತಳಾ ಟಿ.ಶೆಟ್ಟಿಯವರ ಕಾರು ಚಾಲಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.

Also Read  ಕುಂದಾಪುರ: ನೀರು ಸೇದಲು ಹೋದ ವಿದ್ಯಾರ್ಥಿನಿ ಬಾವಿಗೆ ಬಿದ್ದು  ಮೃತ್ಯು

error: Content is protected !!
Scroll to Top