ಇನ್ಮುಂದೆ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಸಂಜೆ ವೇಳೆಯೂ ಆಶ್ಲೇಷಾ ಬಲಿ ಸೇವೆ ► ನೂತನ ಸೇವೆಯಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.01. ಇನ್ಮುಂದೆ ಭಕ್ತರ ಅನುಕೂಲಕ್ಕಾಗಿ ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆಯೂ ಆಶ್ಲೇಷಾ ಬಲಿ ಸೇವೆಯನ್ನು ನಡೆಸಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ಪ್ರಮಾಣ ಅಧಿಕವಾದ ಕಾರಣ ಭಕ್ತರ ಅನುಕೂಲಕ್ಕಾಗಿ ಜುಲೈ 05 ರಿಂದ ಸಂಜೆಯೂ ಆಶ್ಲೇಷಾ ಬಲಿ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಅಷ್ಟ ಮಂಗಲ ಚಿಂತನೆಯನ್ನು ಇಡಲಾಗಿದ್ದು, ಪ್ರಶ್ನೆಯಲ್ಲಿ ಕಂಡುಬಂದಂತಹ ಕೆಲವು ಪ್ರಾಯಶ್ಚಿತ್ತಾದಿಗಳನ್ನು ನೆರವೇರಿಸಲಾಗಿದೆ. ಬೆಳಗ್ಗೆ ನಡೆಯುವ ಆಶ್ಲೇಷಾ ಬಲಿ ಸೇವೆ ಎಂದಿನಂತೆ ಮುಂದುವರಿಯಲಿದ್ದು, ಮಧ್ಯಾಹ್ನ 12.30 ರಿಂದ 4.30ರ ತನಕ ಆಯಾ ದಿನದ ಸೇವಾ ರಶೀದಿ ನೀಡಲಾಗಿ 5 ಗಂಟೆಗೆ ಸೇವೆ ಆರಂಭಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

error: Content is protected !!
Scroll to Top