ಬೆಳ್ಳಾರೆ: ಮದರಸ ವಿದ್ಯಾರ್ಥಿಗಳಿಗೆ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ಯುನಿಟ್ ವತಿಯಿಂದ ಪುಸ್ತಕ ವಿತರಣೆ

(ನ್ಯೂಸ್ ಕಡಬ) newskadaba.com,ಬೆಳ್ಳಾರೆ.ಜೂ.30. ಹಿದಾಯತುಲ್ ಇಸ್ಲಾಮ್ ಮದರಸ ಬೆಳ್ಳಾರೆಯ ವಿದ್ಯಾರ್ಥಿಗಳಿಗೆ ಜೂನ್ ೨೯ ರಂದು ಬೆಳ್ಳಾರೆ ಎಸ್ ಕೆ ಎಸ್ ಎಸ್ ಎಫ್ ಯುನಿಟ್ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮವು ನಡೆಯಿತು .

ಬೆಳ್ಳಾರೆ ಝಕರಿಯ ಜುಮಾ ಮಸೀದಿಯ ಮುದರಿಸ್ಸರಾದ ತಾಜುದ್ದೀನ್ ರಹ್ಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿ ,ದು ಅ ಕ್ಕೆ ನೇತೃತ್ವವನ್ನು ನೀಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು .
ಝಕರಿಯ ಜುಮಾ ಮಸೀದಿ ಆಡಳಿತ ಮಂಡಳಿಯ ಸದಸ್ಯರಾದ ಅಬ್ದುಲ್ ಖಾದರ್ ಬಾಯಂಬಾಡಿ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ,ಪುಸ್ತಕ ವಿತರಿಸಿದರು .ಬೆಳ್ಳಾರೆ ಝಕರಿಯ ಜುಮಾ ಮಸೀದಿ ಆಡಳಿತ ಮಂಡಳಿ ಉಪಾದ್ಯಕ್ಷರದ ಯು ಹೆಚ್ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು.

ಬೆಳ್ಳಾರೆ ಮದರಸದ ಝೈನುದ್ದೀನ್ ಮುಸ್ಲಿಯಾರ್ , ಹಸೈನಾರ್ ಮುಸ್ಲಿಯಾರ್ ಅಜ್ಜಾವರ ,ಝಕರಿಯ ಜುಮಾ ಮಸೀದಿ ಆಡಳಿತ ಮಂಡಳಿಯ ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ ,ಕಾರ್ಯದರ್ಶಿ ಬಶೀರ್ ಕಲ್ಲಪನೆ , ಸದಸ್ಯರಾದ ಬಿ ಎ ಬಶೀರ್ ,ಆಶಿರ್ ಎ ಬಿ ಬೆಳ್ಳಾರೆ ,ಹಿದಾಯ ಬೆಳ್ಳಾರೆ ಟ್ರಸ್ಟಿಗಳಾದ ಎಸ್ ಹೆಚ್ ಹಂಝ , ಶಾಫಿ ಎಂ ಎ ,ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ಮಾಜಿ ಅಧ್ಯಕ್ಷರಾದ ಹಸೈನಾರ್ ಹಾಜಿ ಸಿ ಎಂ , ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ಯುನಿಟ್ ಅಧ್ಯಕ್ಷರಾದ ಅಝರುದ್ದೀನ್ ಬೆಳ್ಳಾರೆ ,ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ಸಕ್ರೀಯ ಕಾರ್ಯಕರ್ತರದ ಜಮಾಲುದ್ದೀನ್ ಕೆ ಎಸ್ , ಮಹಮ್ಮದ್ ಕುಂಞ ಮೋಣು ,ಶಾಫಿ ಸ್ಕೈ ಬೆಳ್ಳಾರೆ ,ಮದರಸ ವಿದ್ಯಾರ್ಥಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಬೆಳ್ಳಾರೆ ಹಿದಾಯತುಲ್ ಇಸ್ಲಾಮ್ ಮದರಸ ಸದರ್ ಮುಅಲ್ಲಿಂ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ,ಸುಲೈಮಾನ್ ಮುಸ್ಲಿಯಾರ್ ವಂದಿಸಿದರು .

Also Read  ಐಟಿಐ ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ

 

error: Content is protected !!
Scroll to Top