ಕೊಣಾಜೆ: ಹಲಸಿನ ಹಣ್ಣಿನ ಖಾದ್ಯಗಳ ಪ್ರಾತ್ಯಕ್ಷಿಕೆ, ಪ್ರದರ್ಶನ

(ನ್ಯೂಸ್ ಕಡಬ) newskadaba.com,ಕಡಬ.ಜೂ.30. ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಪುತ್ತೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಜ್ಞಾನವಿಕಾಸ ಮಹಿಳಾ ಕೇಂದ್ರ ಬಿಳಿನೆಲೆ ವಲಯ, ವಿಜಯ ಗ್ರಾಮೀಣ ಪ್ರತಿಷ್ಠಾನ ಮರ್ದಾಳ ವಲಯ ಇದರ ಆಶ್ರಯದಲ್ಲಿ ಹಲಸಿನ ಹಣ್ಣಿನ ಖಾದ್ಯಗಳ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಕಾರ್ಯಕ್ರಮ ಜೂ.27ರಂದು ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕ ಭಜನಾ ಮಂದಿರದಲ್ಲಿ ನಡೆಯಿತು.
ಭಜನಾ ಮಂಡಳಿ ಪ್ರಧಾನ ಸಂಚಾಲಕ ವಾಸುದೇವ ಭಟ್ ಕಡ್ಯ ಉದ್ಘಾಟಿಸಿದರು. ಕೊಣಾಜೆ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಬೇಬಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರಗತಿಪರ ಕೃಷಿಕ ಶ್ರೀಧರ ಕಂಪರವರು ಹಲಸಿನ ಹಣ್ಣಿನ ಖಾದ್ಯಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ.ಕ್ಷೇ.ಧ.ಗ್ರಾ.ಯೋಜನಾಧಿಕಾರಿ ಜನಾರ್ದನರವರು ಹಲಸಿನ ಹಣ್ಣು ಸೇರಿದಂತೆ ಸಾವಯವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ, ಇಂತಹ ಮಾಹಿತಿಗಳ ಮೂಲಕ ಯುವಕರು ಸ್ವ ಉದ್ಯೋಗಿಗಳಾಗಿ ಸ್ವಾಲಂಬಿ ಬದುಕು ನಡೆಸುವಂತಾಗಬೇಕೆಂದು ಹೇಳಿದರು. ತಾ.ಪಂ.ಸದಸ್ಯ ಮಂಗಳೂರು ವಿಜಯ ಗ್ರಾಮೀಣ ಪ್ರತಿಷ್ಠಾನದ ಸದಸ್ಯ ಗಣೇಶ್ ಕೈಕುರೆ, ತಾ.ಪಂ.ಸದಸ್ಯೆ ಪಿ.ವೈ.ಕುಸುಮ, ಬಿಳಿನೆಲೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಅಧ್ಯಕ್ಷ ಭವಾನಿಶಂಕರ್ರವರು ಸಂದರ್ಭಯೋಚಿತವಾಗಿ ಮಾತನಾಡಿದರು.

Also Read  ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳಸಿ ಪೂಜೆ

ಬಿಳಿನೆಲೆ ವಲಯ ಸಂಯೋಜಕಿ ರತ್ನಾವತಿ ಕೈಕಂಬ, ಕೊಣಾಜೆ ಸ್ವಸಹಾಯ ಸಮಘದ ಸದಸ್ಯೆಯರಾದ ಕುಸುಮಾ, ಯೋಗಿತ, ಶಾಲಿನಿ, ಕುಸುಮಾ, ಜಯಂತಿ ಮೊದಲಾದವರು ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರಾಜು ಗೌಡ ಸ್ವಾಗತಿಸಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೊಣಾಜೆ ಒಕ್ಕೂಟದ ಅಧ್ಯಕ್ಷ ದಯಾನಂದ ವಂದಿಸಿದರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೊಣಾಜೆ ನಿವೇದಿತ ಜ್ಞಾನವಿಕಾಸ ಸಂಘದ ಸದಸ್ಯೆ ವೀಣಾ ಭಟ್ರವರ ನೇತೃತ್ವದಲ್ಲಿ ಮಮತಾ ಭಟ್, ಸುಜಾತ ಭಟ್ರವರು ಹಲಸಿನ ಹಣ್ಣಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದರು ವಿವಿಧ ಖಾದ್ಯಗಳನ್ನು ಸವಿದರು. ಸೇವಾ ಪ್ರತಿನಿಧಿ ಗೋಪಿ ಸಹಕರಿಸಿದರು.
ಅದೃಷ್ಟ ಬಹುಮಾನ ಯೋಜನೆ:
ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಅದೃಷ್ಟ ಬಹುಮಾನ ಯೋಜನೆಯೂ ಹಮ್ಮಿಕೊಳ್ಳಲಾಗಿತ್ತು. ತಾವು ಕುಳಿತುಕೊಂಡಿದ್ದ ಚಯರ್ನ ಅಡಿಯಲ್ಲಿ ಅಂಟಿಸಲಾಗಿದ್ದ ಹಲಸಿನ ಎಲೆಯನ್ನು ಬಿಡಿಸಿ ಮೊದಲು ತಂದು ಕೊಟ್ಟವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದರಲ್ಲಿ ದಮಯಂತಿ ಪ್ರಥಮ ಹಾಗೂ ಕು.ಸುಮಿತ ದ್ವಿತೀಯ ಬಹುಮಾನ ಪಡೆದುಕೊಂಡರು. ಹಲಸಿನ ಖಾದ್ಯದಲ್ಲಿ ತಯಾರಿಸಿದ ಉಪ್ಪಿನಕಾಯಿ ಬಾಟಲಿಯನ್ನು ಬಹುಮಾನವಾಗಿ ನೀಡಲಾಯಿತು.

Also Read  ಮಂಗಳೂರು: ಗಾಂಜಾ ಸೇವನೆ…! ಆರೋಪಿಗಳು ವಶಕ್ಕೆ

 

 

error: Content is protected !!
Scroll to Top