ಮೂಡಬಿದಿರೆ: ಅನಾಮಧೇಯ ಕರೆಯಿಂದ ವಂಚನೆಗೊಳಗಾದ ಮಹಿಳೆ ► ಬ್ಯಾಂಕ್ ಮ್ಯಾನೇಜರ್ ಎಂದು‌ ನಂಬಿಸಿ ಎಟಿಎಂ ಪಿನ್ ಪಡೆದು ವಂಚನೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಜೂ.30. ಬ್ಯಾಂಕ್ ಮೆನೇಜರ್ ಹೆಸರಿನಲ್ಲಿ ಮಹಿಳೆಗೆ ಕರೆ ಮಾಡಿ ಎಟಿಎಂ ಕಾರ್ಡ್‌ನ ಪಿನ್ ಪಡೆದು ಮಹಿಳೆಯ ಖಾತೆಯಿಂದ 6 ಸಾವಿರ ರೂ. ಹಣವನ್ನು ತೆಗೆದು ವಂಚಿಸಿದ ಘಟನೆ ಮೂಡಬಿದಿರೆಯಲ್ಲಿ ಶುಕ್ರವಾರದಂದು ನಡೆದಿದೆ.

ಶುಕ್ರವಾರ ಮಧ್ಯಾಹ್ನದ ವೇಳೆಗೆ ಮೂಡಬಿದಿರೆಯ ಪಡುಮಾರ್ನಾಡಿನ ಮುರಗೋಳಿ ನಿವಾಸಿ ಮಹಿಳೆಗೆ ವ್ಯಕ್ತಿಯೋರ್ವ ಕರೆ ಮಾಡಿ ತನ್ನನ್ನು ಬೆಂಗಳೂರಿನ ಕಾರ್ಪೊರೇಶನ್ ಬ್ಯಾಂಕ್ ಮೆನೇಜರ್ ಎಂದು ಪರಿಚಯಿಸಿಕೊಂಡು ‘ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಕಾರ್ಡ್‌ನ ಹಿಂಬದಿಯಲ್ಲಿರುವ ಸಂಖ್ಯೆಗಳನ್ನು ಕೊಡಿ, ಸರಿಪಡಿಸುವುದಾಗಿ’ ತಿಳಿಸಿದರು. ಪ್ರಾರಂಭದಲ್ಲಿ ಮಹಿಳೆ ಕಾರ್ಡ್ ಸಂಖ್ಯೆ ನೀಡಲು ಹಿಂಜರಿದಾಗ, ನೀವು ನಂಬರ್ ಕೊಡದಿದ್ದರೆ ಬ್ಯಾಂಕ್‌ನಿಂದ ಹಣ ಪಡೆಯಲಾಗುವುದಿಲ್ಲ ಎಂದು ಆ ವ್ಯಕ್ತಿ ಹೆದರಿಸಿದರೆನ್ನಲಾಗಿದೆ. ಈತನ ಮಾತನ್ನು ನಂಬಿದ ಮಹಿಳೆ ಮನೆಯಲ್ಲಿದ್ದ ಎಟಿಎಂ ಕಾರ್ಡ್‌ನ ನಂಬರನ್ನು ಆ ವ್ಯಕ್ತಿಗೆ ಕೊಟ್ಟಿದ್ದಾರೆ.

Also Read  ಬೆಳ್ತಂಗಡಿ: ದಲಿತ ಯುವಕನ ಕೊಲೆ ಪ್ರಕರಣ..!  ➤ ನಾಲ್ವರು ಅರೆಸ್ಟ್

ಇದಾದ ಐದು ನಿಮಿಷದೊಳಗೆ ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ ಆರು ಸಾವಿರ ರೂ. ಹಣ ಡ್ರಾ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅನಾಮಧೇಯ ಕೆರೆಯಿಂದ ತಾನು ಮೋಸ ಹೋಗಿರುವುದಾಗಿ ಮಹಿಳೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

error: Content is protected !!
Scroll to Top