ಮರ್ಧಾಳ ಸೈಂಟ್ ಮೇರಿಸ್ ಪ್ರೌಢಶಾಲಾ ಆಡಳಿತ ಸಮಿತಿ ಮಾಜಿ ಸದಸ್ಯ ಸಿ.ಜೆ.ಫಿಲಿಪ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.28. ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆಯ ಆಡಳಿತ ಮಂಡಳಿಯ ಮಾಜಿ ಸದಸ್ಯ, ಐತ್ತೂರು ಗ್ರಾಮದ ಕರಿಮಾಂಗೆಲ್  ಬೆತ್ತೋಡಿ ನಿವಾಸಿ ಸಿ.ಜೆ.ಫಿಲಿಪ್ (85)ರವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರದಂದು ಸ್ವಗೃಹದಲ್ಲಿ ನಿಧನರಾದರು.

ಪ್ರಗತಿಪರ ಕೃಷಿಕರಾಗಿದ್ದ ಫಿಲಿಪ್‌ ರವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರು. ಮೃತರು ಪತ್ನಿ ಸೊಸಮ್ಮ, ಪುತ್ರರಾದ ಜೋನ್ ಸಿ.ಪಿ, ಕೋಶಿ ಸಿ.ಪಿ., ಮರ್ದಾಳ ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯಗುರು ಈಶೋ ಫಿಲಿಪ್, ಪುತ್ರಿಯರಾದ ಆಲೀಸ್ ಸಾಬು, ಶೈಲ ಫಿಲಿಪ್‌ ರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಗುರುವಾರದಂದು ಅಪರಾಹ್ನ 2.30ಕ್ಕೆ ಮರ್ದಾಳ ಸೈಂಟ್ ಮೇರಿಸ್ ಓರ್ತೊಡಕ್ಸ್ ಚರ್ಚ್‌ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Also Read  ಮಂಗಳೂರು: ಬಾಡಿ ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ► ಆಯುರ್ವೇದಿಕ್ ಥೆರಪಿ ಸೆಂಟರ್ ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು

error: Content is protected !!
Scroll to Top